ಸಾಧಕರಿಗೆ ಸನ್ಮಾನ – ಸ್ಮರಣ ಸಂಚಿಕೆ ಬಿಡುಗಡೆ
ಬೆಳ್ಳಾರೆ ಗ್ರಾಮದ ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಬೆಳ್ಳಿಹಬ್ಬ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭವು ಮೇ.07 ರಂದು ನಡೆಯಿತು.
ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ( ಪ್ರಭಾರ) ಬಿ.ಜಯರಾಮ ರೈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಹೈನುಗಾರರು ಇಂದು ಸದೃಢವಾಗಿ ಬೆಳೆದಿದ್ದಾರೆ.ಜನರು ಕೃಷಿ ಮಾಡುವುದರ ಜೊತೆಗೆ ಹೈನುಗಾರಿಕೆಯಲ್ಲಿ ಕೂಡ ತೊಡಗಿಕೊಂಡು ಕೃಷಿಯಲ್ಲಿ ಸಾಧನೆ ಮಾಡುತ್ತಾ ಉತ್ತಮ ಗುಣಮಟ್ಟದ ಹಾಲನ್ನು ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ ಎಂದು ಹೇಳಿ ಒಕ್ಕೂಟದಿಂದ ಹೈನುಗಾರರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ವೆದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದ.ಕ.ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕರಾದ ಶ್ರೀಮತಿ ಸವಿತಾ ಎನ್.ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಡಿ, ನೆಟ್ಟಾರು ಹಾಲು ಉತ್ಪಾದಕರ ಸಂಘದ ಸ್ಥಾಪಕಾಧ್ಯಕ್ಷ ಸುಂದರ ಪೂಜಾರಿ,ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಿ.ಪರಮೇಶ್ವರ ಭಟ್, ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಗೌರಿ ಸದಾನಂದ,ಸದಸ್ಯರಾದ ವಿಠಲದಾಸ್,ನೆಟ್ಟಾರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ವಿಶ್ವನಾಥ ಪೆಲತ್ತಮೂಲೆ, ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಶ್ರೀಜಿತ್ ರೈ ಮಣಿಕ್ಕಾರ, ಅಕ್ಷತಾ ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ನಳಿನಿ ಶಶಿಕಾಂತ್, ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಡಿ.ಆರ್ . ಸತೀಶ್ ರಾವ್,ಉಪವ್ಯವಸ್ಥಾಪಕ ಕೇಶವ ಸುಳ್ಳಿ, ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಶ್ಯಾನುಭಾಗ್ ಉಪಸ್ಥಿತರಿದ್ದರು.
*ಸಾಧಕರಿಗೆ ಸನ್ಮಾನ*
ಹೈನುಗಾರಿಕೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ವಿಶ್ವನಾಥ ಪೈ, ಹಿರಿಯ ಭತ್ತ ಬೇಸಾಯಗಾರರಾದ ಕೃಷ್ಣಪ್ಪ ಮೂಲ್ಯ ಕೋಡಿಮನೆ, ಖ್ಯಾತ ಗಾಯಕ ಬಾಲಕೃಷ್ಣ ನೆಟ್ಟಾರು ರವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಅಭಿನಂದನಾ ಪತ್ರವನ್ನು ಕು.ಸಿಂಚನಾ,ಚಂದನಲಕ್ಷ್ಮೀ, ಶೈಲೇಶ್ ನೆಟ್ಟಾರು ವಾಚಿಸಿದರು.
*ಸ್ಮರಣ ಸಂಚಿಕೆ ಬಿಡುಗಡೆ*
ಸಂಘವು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂದರ್ಭದ ಸವಿ ನೆನಪಿಗಾಗಿ ಹೊರತರುವ “ಕ್ಷೀರ ಧಾರೆ” ಎಂಬ ಸ್ಮರಣ ಸಂಚಿಕೆಯ ಸಾಂಕೇತಿಕ ಬಿಡುಗಡೆ ನಡೆಯಿತು.
ದ.ಕ.ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಕೆ.ಸ್ವಾಗತಿಸಿ, ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಶ್ಯಾನುಭಾಗ್ ಪ್ರಸ್ತಾವಿಕ ಮಾತನಾಡಿದರು.ಸಂಘದ ಕಾರ್ಯದರ್ಶಿ ಚಂದ್ರಶೇಖರ ಗೌಡ.ಪಿ.ವರದಿ ಮಂಡಿಸಿದರು.
ನಿರ್ದೇಶಕ ವಸಂತ ಗೌಡ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ಸಂಘದ ನಿರ್ದೇಶಕರಾದ ಕೆ.ಎಸ್.ಲೋಕೇಶ್ ಪೂಜಾರಿ ನೆಟ್ಟಾರು, ಭಾಸ್ಕರ ಗೌಡ ನೆಟ್ಟಾರು, ಪುರುಷೋತ್ತಮ ಗೌಡ ನೆಟ್ಟಾರು, ಮಹಾಬಲ ಪೂಜಾರಿ ನೆಟ್ಟಾರು,ಕಿರಣ್ ಶೆಟ್ಟಿ ವೈಪಾಲ,ಸುಬ್ರಹ್ಮಣ್ಯ ಭಟ್ ಬೊಳಿಯಮೂಲೆ ಸಹಕರಿಸಿದರು.
ಸಂಘದ ಎಲ್ಲಾ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಮದ್ಯಾಹ್ನ ಭೋಜನ ನಡೆದ ಬಳಿಕ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.