ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ. ಮತ್ತು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಸಹಯೋಗದೊಂದಿಗೆ “ಉದ್ಯಮ ಶೀಲತಾ ಸ್ವ-ಉದ್ಯೋಗ” ಅರಿವು ಕಾರ್ಯಾಗಾರವನ್ನು ಸಂಜೀವಿನಿ ಕಟ್ಟಡ ಯೆನೆಕಲ್ಲು ಇಲ್ಲಿ ಮೇ 5 ರಂದು ನಡೆಯಿತು. ತೆಲಂಗಾಣ ರಾಜ್ಯದ ಮಿಲ್ಲೆಟ್ ಮ್ಯಾನ್ ಬಿರುದನ್ನು ಪಡೆದಿರುವ ವೀರ ಶೆಟ್ಟಿ ಪಾಟೀಲ್ ಬಿರದಾರ್ ಇವರು ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರಿಗಾಗಿ ಹಾಗೂ ಇತರೆ ದವಸ ಧಾನ್ಯಗಳು ಇದರ ಮೌಲ್ಯವರ್ಧಿತ ಉತ್ಪನ್ನ ಇನ್ನಿತರ ಚಟುವಟಿಕೆಗಳ ಬಗ್ಗೆ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಸ್ವ ಉದ್ಯೋಗ ಉದ್ಯಮಿಗಳು ಇದರ ಬಗ್ಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಎನ್.ಎರ್.ಎಲ್.ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಜಗತ್ ಕೆ, ಒಕ್ಕೂಟದ ಉಪಾಧ್ಯಕ್ಷರಾದ ರಮಣಿ ಕಾರ್ಯದರ್ಶಿ ಮೀನಾಕ್ಷಿ, ಪದಾಧಿಕಾರಿಗಳು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿ ಯು.ಡಿ.ಶೇಖರ್ ಪ್ರಸ್ತಾವನೆ ಮಾತುಗಳನ್ನಾಡಿದರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಸಮುದಾಯ ಸಂಪನ್ಮೂಲ ವ್ಯಕ್ತಿ ಮೋಹನ್ ಕೋಟಿ ಗೌಡನ ಮನೆ,ಉಪಸ್ಥ ಸಂಪನ್ಮೂಲ ವ್ಯಕ್ತಿ ರತ್ನ ನಿರೂಪಣೆ ಮಾಡಿದರು,ಕವಿತಾ ಸ್ವಾಗತಿಸಿದರು ಮುಖ್ಯ ಪುಸ್ತಕ ಬರಹಗಾರರಾದ ಹೇಮಲತಾ ವಂದಿಸಿದರು.