ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ.18 ಹಾಗೂ 19ರಂದು ಪ್ರತಿಷ್ಟಾ ವಾರ್ಷಿಕೋತ್ಸವ ನಡೆಯಲಿರುವುದು. ಮೇ.೧೪ರಂದು ಶ್ರೀ ನರಸಿಂಹ ಜಯಂತಿ ಅಂಗವಾಗಿ ಮಧ್ಯಾಹ್ನ ವಿಶೇಷ ಮತ್ತು ಅದೇ ದಿನ ರಾತ್ರಿ ರಂಗಪೂಜೆ ನಡೆಯಲಿರುವುದು. ಮೇ.೧೮ರಂದು ಸಂಜೆ ಭಜನಾ ಕಾರ್ಯಕ್ರಮ, ೬.೩೦ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮೇ.೧೯ರಂದು ಬೆಳಿಗ್ಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಗಣಪತಿ ಹವನ, ಬಿಂಬಶುದ್ಧಿ, ಕಲಶಪೂಜೆ, ಕಲಶಾಭಿಷೇಕ, ಮಹಾಪೂಜೆ ಬಳಿಕ ಶ್ರೀ ದೇವರ ಬಲಿ ಹೊರಡುವುದು, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಂಗಳಾರತಿ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ಅನ್ನಸಂತರ್ಪಣೆ ನಡೆಯಲಿರುವುದು.
ಶ್ರೀ ಕ್ಷೇತ್ರದಲ್ಲಿ ಭಾದ್ರಪದ ಶುಕ್ಲ ಚೌತಿ, ಗಣೇಶ ಚತುರ್ಥಿ ಕಾರ್ಯಕ್ರಮ, ನವರಾತ್ರಿಯಂದು ನವಮಿ ರಾತ್ರಿ ವಿಶೇಷ ಪೂಜೆ ಮತ್ತು ರಂಗಪೂಜೆ, ವಿಜಯದಶಮಿಯಂದು ಮಧ್ಯಾಹ್ನ ವಿಶೇಷ ಪೂಜೆ, ಅಕ್ಷರಾಭ್ಯಾಸ, ನವಾನ್ನ ಭೋಜನ, ಮೇಷ ಸಂಕ್ರಮಣ ವಿಷು ಪ್ರಯುಕ್ತ ವಿಶೇಷ ಪೂಜೆ, ಬೆಳೆ ಸಮರ್ಪಣೆ ಕಾರ್ಯಕ್ರಮ, ಪ್ರತಿಷ್ಟಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ, ನರಸಿಂಹ ಜಯಂತಿ, ವಿಶೇಷ ಪೂಜೆ, ರಾತ್ರಿ ರಂಗಪೂಜೆ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಬೇಕೆಂದು ಹಾಗೂ ತನು ಮನ ಧನ ಸಹಾಯವನ್ನು ಸ್ವೀಕರಿಸಲಾಗುವುದೆಂದು ದೇವಳದ ಪ್ರಕಟಣೆ ತಿಳಿಸಿದೆ.
ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ