ಕಾಯರ್ತೋಡಿ ಸೂರ್ತಿಲ ಬಳಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಕ್ತೇಶ್ವರಿ ಕ್ಷೇತ್ರದ ಕಾಮಗಾರಿಯು ಈಗಾಗಲೇ ಅಡಿಪಾಯದ ಕೆಲಸ ಪೂರ್ತಿಗೊಂಡಿದ್ದು, ತಡೆಗೋಡೆಯ ಕೆಲಸ ಪ್ರಾರಂಭಗೊಂಡಿದೆ.ಇದಕ್ಕೆ ಆರ್ಥಿಕ ನೆರವಿನ ಅಗತ್ಯವಿದ್ದು ಕಾಯರ್ತೋಡಿ ಬೈಲಿನಲ್ಲಿ ನಾಲ್ಕು ತಂಡಗಳು ರಚನೆಗೊಂಡಿದ್ದು ಕಾಮಗಾರಿಗೆ ಬೇಕಾದ ಆರ್ಥಿಕ ಕ್ರೋಢೀಕರಣ ನಡೆಯುತ್ತಿದ್ದು, ಭಕ್ತಾದಿಗಳು ವಾಗ್ದಾನ ನೀಡಿದ ಪ್ರಕಾರ ಹಣವನ್ನು ನೀಡುತ್ತಿದ್ದಾರೆ. ರಕ್ತೇಶ್ವರಿ ಸೇವಾ ಸಮಿತಿ ಕಾರ್ಯದರ್ಶಿ ಜಯರಾಮ ಸೂರ್ತಿಲ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಮುಂದೆ ನಡೆಯುವ ಕೆಲಸದ ಬಗ್ಗೆ ಸಭೆಗೆ ತಿಳಿಸಿದರು. ಕಾರ್ಯದರ್ಶಿ ಜಯರಾಮ ವಂದಿಸಿದರು.