ಟೆಕ್ ಸಂವೇಧ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ರೋಬೋಟಿಕ್ ಬಗ್ಗೆ ಅರಿವು ಮೂಡಿಸುವ ಹಾಗೂ ವಿಜ್ಞಾನದ ಪ್ರಾಯೋಗಿಕ ಶಿಕ್ಷಣ ನೀಡುವ ರೋಬೋಟಿಕ್ ಬೇಸಿಗೆ ಶಿಬಿರ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ಮೇ.2ರಿಂದ ಮೇ.7ರವರೆಗೆ ನಡೆಯಿತು. ಬೆಳ್ಳಾರೆಯಲ್ಲಿ ನಡೆದ ಶಿಬಿರವನ್ನು ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಉದ್ಘಾಟಿಸಿ ಶುಭಹಾರೈಸಿದರು.
ಸುಳ್ಯದ ಟೆಕ್ ಸಂವೇಧ ಸಂಸ್ಥೆಯ ತರಾಬೇತು ಸಂಯೋಜಕರಾದ ಗಣೇಶ್ ಎಂ. ಎಸ್ ಮತ್ತು ಕಿರಣ್ ಬಿ. ವಿ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ರೋಬೋಟಿಕ್ ಬಗ್ಗೆ ವಿವಿಧ ಪ್ರಾಯೋಗಿಕ ಶಿಕ್ಷಣದೊಂದಿಗೆ ತರಬೇತಿ ನೀಡಿದರು. ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಿರಣ್ ಬಿ. ವಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.