ಸುಬ್ರಹ್ಮಣ್ಯ: ಪಂಚಪರ್ವದ 27 ಕೆಲಸಗಾರರಿಂದ ಹೇಳಿಕೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲಸ ಕಳೆದುಕೊಂಡ ಪಂಚಪರ್ವದ 27 ಕೆಲಸಗಾರರು ಇಂದು ಪತ್ರಿಕಾಗೋಷ್ಠಿ ನಡೆಸಿದ್ದು ಮತ್ತೆ ದೇವಸ್ಥಾನದಲ್ಲಿ ಕೆಲಸಕ್ಕೆ ಸೇರಿಸಿ ಕೊಳ್ಳುವಂತೆ ಆಗ್ರಹಿಸಿದ್ದಾರೆ. ಇವರಿಗೆ ಸಾಥ್ ನೀಡಿರುವ ಕಿಶೋರ್ ಶಿರಾಡಿ ಮತ್ತಿತರು ಕೆಲಸವನ್ನು ಮತ್ತೆ ತೆಗೆಸಿಕೊಡದಿದ್ದಲ್ಲಿ ಕಾರ್ಯನಿರ್ವಹಣಾಧಿಕಾರಿ ಕಛೇರಿ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಇಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.
ನಮ್ಮನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದು ಹಾಕಲಾಗಿದ್ದು ಕಳೆದ 3ವರ್ಷಗಳಿಂದ ದಿನಗೂಲಿ ನೌಕರರಾಗಿ ಕಾಯಂ ಆಗಿ ಕೆಲಸ ಕೊಡುತ್ತಿದ್ದರು. ಅದಕ್ಕಾಗಿ ನಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತಿದ್ದು ಇದೀಗ ಏಕಾ ಏಕಿ ಕೆಲಸ ಇಲ್ಲ ಎಂದು ಕೆಲಸವನ್ನು ಕಿತ್ತುಕೊಳ್ಳಲಾಗಿದೆ. ದೇವಸ್ಥಾನದಲ್ಲಿ ಕೆಲಸ ಇದೆ. ಅನಿವಾರ್ಯವಾಗಿ ಕೆಲವೊಮ್ಮೆ ಭಕ್ತಾದಿಗಳಿಂದ ಕೆಲಸಗಳನ್ನು ಮಾಡಿಸಿದ್ದು ನಡೆದಿದೆ ಎಂದರು. ಆಡಳಿತ ಮಂಡಳಿಯ ಮೇಲೆ ಗೂಬೆ ಕೂರಿಸಲು ಕಾರ್ಯನಿರ್ವಹಣಾಧಿಕಾರಿ ಈ ಕೆಲಸ ಮಾಡಿದ್ದಾಗಿ ಕಿಶೋರ್ ಶಿರಾಡಿ ಆರೋಪಿಸಿದ್ದಾರೆ.
ನಮ್ಮನ್ನು ತೆಗೆದುಹಾಕಲು ಮೇಲಿಂದ ಯಾವುದೇ ಆದೇಶ ಇಲ್ಲದಿದ್ದರೂ ಕಾರ್ಯನಿರ್ವಹಣಾಧಿಕಾರಿಯವರು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದರು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಲೆ ಕುಡಿಯ ಹಿತರಕ್ಷಣಾ ವೇದಿಕೆಯ ಸಂಚಾಲಕ ಪದ್ಮಕುಮಾರ್, ಪಂಚ ಪರ್ವದ ಕೆಲಸದವರಾದ ಬಾಲಚಂದ್ರ, ಹರೀಶ್ ಎಸ್ ಎಸ್, ಧನುಶ್, ಶ್ರೇಯಸ್ ಶಿವಪ್ರಸಾದ್, ಲೊಕೇಶ್, ತಿಮ್ಮಪ್ಪ, ಗಂಗಾಧರ, ಹರಿಶ್ಚಂದ್ರ, ಗುರುಪ್ರಸಾದ್, ಎಸ್ ಕುಮಾರ, ಶಿವಕುಮಾರ, ರಮೇಶ, ತೇಜಕುಮಾರ್, ರಘುರಾಮ, ಸಂಪತ್, ಕುಶಾಲಪ್ಪ, ಸುಬ್ಬಪ್ಪ, ಸುಬ್ರಹ್ಮಣ್ಯ ಪ್ರಸಾದ್, ಜಗದೀಶ, ಮಹೇಶ, ಶಿವಕುಮಾರ್ , ಪವನ್ ಕುಮಾರ್, ಮೋಹನ ಕುಮಾರ್, ಧನ್ ರಾಜ್, ಮೋಹನ ಕೈಕಂಬ, ಹೇಮಂತ್ ಉಪಸ್ಥಿತರಿದ್ದರು.