ಮಹಿಳೆಯರ ವಿಭಾಗದಲ್ಲಿ ಚೆನ್ನೈ ಐ.ಸಿ.ಎಫ್. ಗೆ ಮೂರನೇ ಸ್ಥಾನ, ಕರ್ನಾಟಕ ಕ್ಲಬ್ ಚತುರ್ಥ
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಮೂರನೇ ಮತ್ತು ನಾಲ್ಕನೇ ಸ್ಥಾನಗಳು ನಿರ್ಧಾರಗೊಂಡಿದ್ದು, ಈ ತಂಡಗಳಿಗೆ ಇಂದು ಪ್ರಶಸ್ತಿ ವಿತರಿಸಲಾಯಿತು.
ಮಹಿಳೆಯರ ವಿಭಾಗದಲ್ಲಿ ಚೆನ್ನೈ ಐ.ಸಿ.ಎಫ್. ಮೂರನೇ ಸ್ಥಾನ ಪಡೆದಿದ್ದು, ಕರ್ನಾಟಕ ಕ್ಲಬ್ ಚತುರ್ಥ ಸ್ಥಾನ ಪಡೆದಿದೆ.