ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ನೇತೃತ್ವದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಾಳೆ ಮೇ.8 ರಂದು ಕಲ್ಮಕಾರಿನಿಂದ ಹರಿಹರ ತನಕ ಬೃಹತ್ ನದಿ ಸ್ವಚ್ಚತಾ ಅಭಿಯಾನ ನಡೆಯಲಿದೆ.
ಕಡಮಕಲ್ಲು ನಿಂದ ಹರಿದು ಬರುವ ಹೊಳೆ ಮತ್ತು ಕೂಜುಮಲೆಯಿಂದ ಬರುವ ಹೊಳೆ ಉಮಗದಿಂದ ತಲಾ 5 ಕಿ.ಮೀ ನಂತೆ. ಹಾಗೂ ಕಲ್ಮಕಾರಿನಿಂದ ಎರಡೂ ನದಿಗಳು ಸೇರಿ ಹರಿಯುವ ಗೌರಿ ಹೊಳೆ ಹರಿಹರದ ವರೇಗೆ 10 ಕಿ.ಮೀ ಹೀಗೆ ಒಟ್ಟಾಗಿ 20 ಕಿ. ಮೀ ಸ್ವಚ್ಚತಾ ಕಾರ್ಯ ನಡೆಯಲಿದೆ . ಗಡಿಕಲ್ಲಿನ ಶ್ರೀ ಮಹಾವಿಷ್ಣು ಮೂರ್ತಿ ಸನ್ನಿದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.