ವೃತ್ತಿ ಮತ್ತು ವ್ಯವಹಾರಿಕ ಕ್ಷೇತ್ರದಲ್ಲಿನ ಮಹತ್ವದ ಕೊಡುಗೆಗಾಗಿ ದೇಶದ ಅತಿದೊಡ್ಡ UPI ಸೇವಾ ಸಂಸ್ಥೆಯಾದ ಪ್ರತಿಷ್ಠಿತ ವೈಬಿಎಲ್ ಗ್ರೂಪ್ ಚೆನೈನಲ್ಲಿ ನಡೆದ ತಮ್ಮ ಸಂಸ್ಥೆಯ ಕಾರ್ಯಕ್ರಮದಲ್ಲಿ ನೌಶಾದ್ ಗೂನಡ್ಕ ಅವರಿಗೆ The Young Leader ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪ್ರಸ್ತುತ ಇವರು ಸದರಿ ಸಂಸ್ಥೆಯ ಕರ್ನಾಟಕ ರಾಜ್ಯ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, The Young Leader ಪ್ರಶಸ್ತಿಯು ವೃತ್ತಿ ಮತ್ತು ವ್ಯವಹಾರ ಸವಾಲುಗಳಿಗೆ ನವೀನ ಪರಿಹಾರಗಳನ್ನು ಒದಗಿಸುತ್ತಿರುವ ಸಂಸ್ಥೆಯ ಹೊಸ ತಲೆಮಾರಿನ ನಾಯಕರನ್ನು ನಿರ್ದಿಷ್ಟವಾಗಿ ಗುರುತಿಸುತ್ತದೆ.
ನೌಶಾದ್ ಗೂನಡ್ಕರವರು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರ ಪುತ್ರ.