ಡೆಂಟಲ್ ಪ್ರೀಮಿಯರ್ ಲೀಗ್- 2022
ಸುಳ್ಯದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ೧೦ನೇ ವರ್ಷದ ಡೆಂಟಲ್ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ಮೇ. ೬ರಂದು ಜರುಗಿತು.
ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ವಾಲಿಬಾಲ್ಆಟಗಾರ ಅನೂಪ್ ಡಿ ಕೋಸ್ಟ ಭಾಗವಹಿಸಿದರು. ಅಕಾಡೆಮಿಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂದ್ಯಾಟದ ಕೇಕ್ ಕತ್ತರಿಸಿ ಮಾತನಾಡಿದ ಅವರು, ಕ್ರಿಕೆಟ್ ಭಾರತೀಯರ ಜೀವನಾಡಿ ಎಂದರಲ್ಲದೆ ಕ್ರಿಕೆಟ್ ಹಬ್ಬದಲ್ಲಿ ಭಾಗವಹಿಸುವ ಎಲ್ಲಾ ಟೀಮ್ಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ|| ಮೋಕ್ಷಾ ನಾಯಕ್ ಆಗಮಿಸಿದ ಎಲ್ಲ ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಡಾ. ನವೀನ್ಕುಮಾರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿ, ಕೊನೆಯಲ್ಲಿಡಾ. ಅಲ್ವಿನ್ ಆಂಟೋನಿ ವಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಕೆ.ವಿ.ಜಿಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಉಜ್ವಲ್ಊರುಬೈಲು, ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಗರ್ವನಿಂಗ್ ಕೌನ್ಸಿಲ್ನ ಸದಸ್ಯ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ಕೆ.ವಿ.ಜಿ ದಂತ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಶರತ್ಕುಮಾರ್ ಕೆ.ಎ, ಡಾ. ಸವಿತಾ ಸತ್ಯಪ್ರಸಾದ್, ಡಾ. ದಯಾಕರ್ಎಂ.ಎನ್, ಡಾ. ಕೃಷ್ಣಪ್ರಸಾದ್ಎಲ್, ಡಾ. ಜಯಪ್ರಸಾದ್ಆನೆಕಾರ್, ಡಾ. ನುಸ್ರತ್ ಫರೀದ್, ಡಾ. ಪ್ರಸನ್ನಕುಮಾರ್ ಡಿ., ಡಾ. ಹರಿಶ್ಚಂದ್ರ ರೈ ಮತ್ತುಕೆ.ವಿ.ಜಿ ದಂತ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಾಧವ ಬಿ.ಟಿ ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಮತ್ತು ಮಾಜಿ ಉದ್ಯೋಗಿಗಳು ಭಾಗವಹಿಸಿದರು.