ಸುಳ್ಯ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ, ಬಳಿಕ ಚಿಕ್ಕಮಗಳೂರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಪದೋನ್ನತಿಗೊಂಡು ಎ.೩೦ರಂದು ಸರಕಾರಿ ಸೇವೆಯಿಂದ ನಿವೃತ್ತರಾದ ಲಕ್ಷ್ಮೀಶ್ ರೈ ರೆಂಜಾಳರಿಗೆ ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘಗಳು ಹಾಗೂ ಲಕ್ಷ್ಮೀಶ್ ರೈ ಅಭಿನಂದನಾ ಸಮಿತಿ ಇದರ ವತಿಯಿಂದ ಬೀಳ್ಕೊಡುಗೆ ಸಮಾರಂಭ ಮೇ.೭ರಂದು ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ಉದ್ಘಾಟಿಸಿದರು. ಬಳಿಕ ಲಕ್ಷ್ಮೀಶ್ ರೈ ದಂಪತಿಗಳನ್ನು ಸನ್ಮಾನಿಸಿದರು.
ಸುಳ್ಯ ತಾಲೂಕು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ಅಭಿನಂದನಾ ಭಾಷಣ ಮಾಡಿದರು. ಸುಳ್ಯ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರು ರೆ.ಫಾ. ವಿಕ್ಟರ್ ಡಿ’ಸೋಜ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್ ಯು.ಕೆ., ಸುಳ್ಯ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶ್ರೀಮತಿ ವೀಣಾ ಎಂ.ಟಿ., ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ ಹೆಚ್.ಬಿ. ಮುಖ್ಯ ಅತಿಥಿಗಳಾಗಿದ್ದರು.
ಇತ್ತೀಚೆಗೆ ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಅಮರಮುಡ್ನೂರು ಶಾಲೆಯ ನಿವೃತ್ತ ದೈ.ಶಿ.ಶಿಕ್ಷಕ ತೀರ್ಥೇಶ್ವರ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಶಾಲೆಯ ನಿ.ದೈ.ಶಿಕ್ಷಣ ಶಿಕ್ಷಕ ಚಂದ್ರಶೇಖರ ಎಂ, ಎಡಮಂಗಲ ಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ತಾರಾವತಿ, ಕುಕ್ಕುಜಡ್ಕ ಶಾಲೆಯ ನಿವೃತ್ತ ದೈ.ಶಿಕ್ಷಣ ಶಿಕ್ಷಕಿ ರಾಜೀವಿ, ಕದಿಕಡ್ಕ ಶಾಲಾ ನಿವೃತ್ತ ದೈ.ಶಿ.ಶಿಕ್ಷಕಿ ಫ್ರಿಡಾ ಐಡಾ ಲೂಯಿಸ್ ರನ್ನು ಸನ್ಮಾನಿಸಲಾಯಿತು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ವನಿತಾ, ಗ್ರೇಡ್ ೧೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಧನಂಜಯ ಸಂಪಾಜೆ, ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಯೇನೆಕಲ್ಲು ವೇದಿಕೆಯಲ್ಲಿದ್ದರು.
ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸೂಫಿ ಪೆರಾಜೆ ಸ್ವಾಗತಿಸಿದರು. ಲಕ್ಷ್ಮೀಶ್ ರೈ ಅಭಿನಂದನಾ ಸಮಿತಿ ಸಂಚಾಲಕ ತೀರ್ಥರಾಮ ಅಡ್ಕಬಳೆ ವಂದಿಸಿದರು. ಸುಜಯ ಮರ್ಕಂಜ ಕಾರ್ಯಕ್ರಮ ನಿರೂಪಿಸಿದರು.
(ವರದಿ : ಪುನೀತ್ ಅಚ್ಚಿಪಳ್ಳ)