ಐವರ್ನಾಡಿನ ಅಣ್ಣ ದಿ. ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ಲೋಕಾರ್ಪಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಯುವ ಪೀಳಿಗೆಗೆ ಪ್ರೇರಣೆಗಳನ್ನು ಕೊಡಬಲ್ಲ ಅದ್ಭುತ ವ್ಯಕ್ತಿ ಎನ್.ಎಂ.ಬಾಲಕೃಷ್ಣ ಗೌಡರು‌ :  ಡಿ.ವಿ.ಸದಾನಂದ ಗೌಡ

ಯುವ ಪೀಳಿಗೆ ದಿ.ಎನ್.ಎಂ.ಬಾಲಕೃಷ್ಣ ಗೌಡರ ಆದರ್ಶಗಳನ್ನು ಮೈಗೂಡಿಸಲು,ವ್ಯಕ್ತಿತ್ವವನ್ನು ವಿಕಸನಗೊಳಿಸಲು ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ.ಸಮಾಜಕ್ಕೆ ಕೊಡುಗೆಗಳನ್ನು ನೀಡಿರುವ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದರ ಮುಖಾಂತರ ಅವರಿಗೆ ಗೌರವವನ್ನು ಕೊಡಬೇಕು.ನಮ್ಮ ಆಚಾರ ವಿಚಾರ ಸಂಸ್ಕೃತಿಗಳು ಜ್ವಲಂತವಾಗಿ ಉಳಿಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಲೋಕಸಭಾ ಸದಸ್ಯ ಡಿ.ವಿ.ಸದಾನಂದ ಗೌಡ ಹೇಳಿದರು.
ಅವರು
ಐವರ್ನಾಡು ಗ್ರಾಮದ ಕೊಡುಗೈದಾನಿ,ರಾಜಕೀಯ ಮುಂದಾಳು ಐವರ್ನಾಡಿನ ಅಣ್ಣ ದಿ.ಶ್ರೀ ಎನ್.ಎಂ.ಬಾಲಕೃಷ್ಣ ಗೌಡರ ನೆನಪನ್ನು ಶಾಶ್ವತವಾಗಿರಿಸಲು ಐವರ್ನಾಡಿನ ಕೇಂದ್ರ ಭಾಗದಲ್ಲಿ ಸ್ಥಾಪಿಸಿದ ಭವ್ಯ ಪುತ್ಥಳಿಯನ್ನು ಮೇ.08 ರಂದು ಅವರು ಲೋಕಾರ್ಪಣೆಗೈದು ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮೀನುಗಾರಿಕೆ,ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ.ದಾನಿಗಳ ನಾಮಫಲಕ ಅನಾವರಣ ಮಾಡಿದರು.
ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಸಂಸ್ಮರಣ ಭಾಷಣ ಮಾಡಿದರು ಬಳಿಕ ದ.ಎನ್.ಎಂ.ಬಾಲಕೃಷ್ಣ ಗೌಡರ ಸವಿನೆನಪಿಗಾಗಿ ಹೊರತಂದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್, ಪುತ್ಥಳಿ ಸಮಿತಿ ಗೌರವಾಧ್ಯಕ್ಷೆ ಶ್ರೀಮತಿ ಜ್ಯೋತ್ಸ್ನಾ ಪಾಲೆಪ್ಪಾಡಿ ದಯಾಕರ್ ದಂಪತಿಗಳನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಬಡ್ಡಿ ಆಟಗಾರ ಸಚಿನ್ ಪ್ರತಾಪ್ ರವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸುಳ್ಯ ಸಾಂದೀಪ್ ವಿಶೇಷ ಶಾಲೆಯ ಅಧ್ಯಕ್ಷ ಎಂ.ಬಿ.ಸದಾಶಿವ ,ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ ಪುತ್ಥಳಿ ಸಮಿತಿಯ ಉಪಾಧ್ಯಕ್ಷರುಗಳಾದ ಮಾಧವ ಭಟ್ ಶೃಂಗೇರಿ, ಶ್ರೀಮತಿ ಸುಜಾತ ಪವಿತ್ರಮಜಲು, ಅಚ್ಚುತ ಗೌಡ ಕುದುಂಗು, ದಾಮೋದರ ಗೌಡ ಜಬಳೆ, ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ಪದ್ಮನಾಭ ಗೌಡ ನೂಜಾಲು ಕೋಶಾಧಿಕಾರಿ ರವಿಪ್ರಸಾದ್ ಸಿ.ಕೆ, ಸಂಚಾಲಕರುಗಳಾದ ಮಹೇಶ ಜಬಳೆ, ಸಾತ್ವಿಕ್ ಕುದುಂಗು,ರಾಮಚಂದ್ರ ಗೌಡ ಪಲ್ಲತ್ತಡ್ಕ, ಕೇಶವ ಗೌಡ ಹಸಿಯಡ್ಕ, ಚಂದ್ರಶೇಖರ ಮಡ್ತಿಲ, ನವೀನಚಂದ್ರ ಚಾತುಬಾಯಿ,ರಮೇಶ ಗೌಡ ಮಿತ್ತಮೂಲೆ, ಸಂಪ್ರೀತ್ ಮಿತ್ತಮೂಲೆ, ಶಾಂತಾರಾಮ ಕಣಿಲೆಗುಂಡಿ, ಶಿವಪ್ರಸಾದ್ ಕಟ್ಟತ್ತಾರು, ಅನಂತಕುಮಾರ ಖಂಡಿಗೆಮೂಲೆ ಉಪಸ್ಥಿತರಿದ್ದರು.
ಪುತ್ಥಳಿ ಸಮಿತಿ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸ್ವಾಗತಿಸಿ,ಪ್ರಸ್ತಾವಿಕ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ,
ಪುತ್ಥಳಿ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಮಡ್ತಿಲ ವಂದಿಸಿದರು.
ಸುಬ್ರಹ್ಮಣ್ಯ ಬಾಂಜಿಕೋಡಿ ಮತ್ತು ಮೋಕ್ಷಾ ಕಣಿಲೆಗುಂಡಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.