ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಪಂಚಮಿ ಸಂಕೀರ್ಣ ದಲ್ಲಿ ಕು.ಗೌತಮಿ ಯವರ ಮಾಲಕತ್ವದ ಲಕ್ಷ್ಮೀ ಪಾರಿಜಾತ ಫಾರ್ಮಾ ಮೆಡಿಕಲ್ಸ್ ಮೆ.8 ರಂದು ಶುಭಾರಂಭಗೊಂಡಿತು.
ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ದೀಪ ಬೆಳಗಿಸಿ ಮಾತನಾಡಿದ ಅವರು ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮಗಳನ್ನು ಒಳಗೊಂಡ ಈ ಪರಿಸರದಲ್ಲಿ ಪ್ರಥಮವಾಗಿ ಮೆಡಿಕಲ್ಸ್ ತರೆದು ಗ್ರಾಮದ ಜನತೆಗೆ ಅತ್ಯಂತ ಅವಶ್ಯವಾದ ಆರೋಗ್ಯದಾಯಕ ವ್ಯವಸ್ಥೆ ಇದಾಗಿದ್ದು ಸತ್ಕಾಲದಲ್ಲಿ ಇದರ ಸದುಪಯೋಗ ಎಲ್ಲರಿಗೂ ಲಭಿಸುವಂತಾಗಲಿ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಅಮರಮುಡ್ನೂರು ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ, ಹಿರಿಯರಾದ ಪ್ರಗತಿಪರ ಕೃಷಿಕ ಆನೆಕಾರ ಗಣಪಯ್ಯ , ಹೇಮನಾಥ ಬಡ್ಡಡ್ಕ, ಪಂ .ಮಾಜಿ ಸದಸ್ಯ ತಿಮ್ಮಪ್ಪ ಕೊಂಡೆಬಾಯಿ ಉಪಸ್ಥಿತರಿದ್ದರು. ಈ ಸಂದರ್ಭ ಹಿರಿಯ ವೈದ್ಯರಾದ ಡಾ.ಗೋಪಾಲಕೃಷ್ಣ ಭಟ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ಶಿಕ್ಷಕ ಕಾಂಪ್ಲೆಕ್ಸ್ ಮಾಲಕರಾದ ಮೋಹನ ಗೌಡ ಮತ್ತು ಶ್ರೀಮತಿ ಜಯಲಕ್ಷ್ಮೀ ಎಲ್ಲರನ್ನೂ ಸ್ವಾಗತಿಸಿದರು.