ಸಜ್ಜನ ಪ್ರತಿಷ್ಠಾನದ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಅದೃಷ್ಟ ದಂಪತಿಗಳಿಗೆ ಬಹುಮಾನ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯ ಗೂನಡ್ಕ‌ ಸಜ್ಜನ ಸಭಾಂಗಣದಲ್ಲಿ ಈ ವರ್ಷದಲ್ಲಿ ನಡೆದಿರುವ ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಆಯ್ಕೆಯಾಗಿರುವ ಅದೃಷ್ಟ ದಂಪತಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಾಗೂ ಸಜ್ಜನ ಸ್ನೇಹ ಸಮ್ಮಿಲನ ಹಾಗೂ ಪತ್ರಕರ್ತರೊಂದಿಗೆ ಸ್ನೇಹ ಕೂಟ ‌ಕಾರ್ಯಕ್ರಮ ಸುಳ್ಯ ಜಟ್ಟಿಪಳ್ಳ ಎಬಿಎಂ ಪ್ಯಾಲೇಸ್ ನಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಸುಳ್ಯ ತಹಶಿಲ್ದಾರ್ ಕು.ಅನೀತಾಲಕ್ಷ್ಮಿ ಉದ್ಘಾಟಿಸಿದರು.
ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆ ವಹಿಸಿದ್ದರು
ಸಜ್ಜನ ಅದೃಷ್ಟ ದಂಪತಿ ಆಯ್ಕೆಯಲ್ಲಿ ಶರತ್ ಮತ್ತು ಸನಿಹ ದಂಪತಿಗಳು ಪಡೆದು ಕೊಂಡರು.
ಅಷ್ಪಾನ ಮತ್ತು ಹಸೈನಾರ್ ದಂಪತಿಗಳು ಪಡೆದುಕೊಂಡರು.


ಮುರಳಿ ಮತ್ತು ಹರ್ಷಿತಾ ದಂಪತಿಗಳು ತೃತೀಯ ಬಹುಮಾನ ಪಡೆದುಕೊಂಡರು.
ಸಜ್ಜನ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಕೊಡಗು ಕೆನರಾ ರೈತ ಬಂಡಾಯ 1837 ಕೃತಿ ರಚನಾಕಾರ ಡಾ.ಪ್ರಭಾಕರ ಶಿಶಿಲ,ಸುದ್ದಿ ಜನಾಂದೋಲನ ವೇದಿಕೆ ಸಂಚಾಲಕ ಲಂಚ ಭ್ರಷ್ಟಾಚಾರ ವಿರೋಧಿ ಅಭಿಯಾನದ ರೂವಾರಿ ಡಾ.ಯು.ಪಿ ಶಿವಾನಂದ, ಸುಳ್ಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಚಂದ್ರಶೇಖರ ಪೇರಾಲು ಹಾಗೂ ಫೆಡರಲ್ ಬ್ಯಾಂಕ್ ‌ಸುಳ್ಯ ಶಾಖೆ ಉಪ ವ್ಯವಸ್ಥಾಪಕ ಸಂಭ್ರಮ್ ರವರನ್ನು ಗೌವರಿಸಿ ಸನ್ಮಾಸಲಾಯಿತು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧಿಕಾರಿ ದಯಾನಂದ ಆಳ್ವ,ನ್ಯಾಯವಾದಿ ಕೃಷ್ಣ ಮೂರ್ತಿ,ನ್ಯಾಯವಾದಿ ನಾರಾಯಣ ಜಟ್ಟಿಪಳ್ಳ,ಮಧುರ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಚೆಯರ್ ಮೆನ್ ಹನೀಫ್ ವೈಸ್ ಚೆಯರ್ಮೆನ್ ಜಾವೇದ್,ಗೂನಡ್ಕ ಶ್ರೀ ಶಾರದಾ ಅನುದಾನಿತ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಜಿ ರಾಮಚಂದ್ರ ಕಲ್ಲುಗದ್ದೆ,ದಾವಣಗೆರೆ ಉದ್ಯಮಿ ಅಶೀಫ್ ಶಿರೂರ್ ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ದುರ್ಗಾಕುಮಾರ್ ಸ್ವಾಗತಿಸಿ
ಸಜ್ಜನ ಪ್ರತಿಷ್ಠಾನ ನಿರ್ದೇಶಕ ಶರೀಫ್ ಜಟ್ಟಿಪಳ್ಳ
ಸಜ್ಜನ ಪ್ರತಿಷ್ಠಾನ ನಿರ್ದೇಶಕ ರಹೀಮ್ ಬೀಜದಕಟ್ಟೆ,ಇಂಜಿನಿಯರ್ ‌ಕಲಂದರ್ ಎಲಿಮಲೆ,ಮಂಜುನಾಥ್ ಹಿರಿಯೂರು, ರಕ್ಷೀತ್ ಕಾರ್ಯಕ್ರಮ ನಿರೂಪಿಸಿದರು.
ಕಲಾಂ ಬೀಜಕೊಚ್ಚಿ ವಂದಿಸಿದರು.
ಶಿಹಾಬ್ ಷಾ,ಅಬ್ದುಲ್ ರಹಿಮಾನ್ ಕೆ.ಎ,ರಜಾಕ್ ಕೆ.ಎಂ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.