ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಆಲೆಟ್ಟಿ ಗ್ರಾಮದ ಹಾಸ್ಪಾರೆ ದಿ. ವಿಶ್ವನಾಥ ಮಣಿಯಾಣಿ ಹಾಗೂ ದಿ. ಜಾನಕಿ ದಂಪತಿಗಳ ಪುತ್ರ ನಿತ್ಯಾನಂದ ಹಾಸ್ಪಾರೆ ಅವರಿಗೆ ತುಮಕೂರಿನ ಕೊರಟಗೆರೆಯ ಪುಟ್ಟಸಂದ್ರ ಶ್ರೀ ವಿಷ್ಣುಸಾಯಿ ಕಲಾಸಂಘದ ಶ್ರೀ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಅತ್ಯುತ್ತಮ ಯಕ್ಷಗಾನ ಅರ್ಥಧಾರಿ, ವೇಷದಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಮಣಿರಾಂ ಗ್ರೂಫ್ ಆಫ್ ಇಂಡಸ್ಟ್ರೀಸ್ ನಲ್ಲಿ ಜನರಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಪತ್ನಿ ಶ್ರೀಮತಿ ಸುಧಾನಿತ್ಯಾನಂದ ಮಕ್ಕಳಾದ ತಿರುಮಲೇಶ್ ಹಾಗೂ ತೇಜೆಸ್ವಿ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.