ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆ ಅಭಿವೃದ್ಧಿಗಾಗಿ ಊರವರಿಂದ ಸಚಿವ ಅಂಗಾರರಿಗೆ ಮನವಿ – ಭರವಸೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪಂಬೆತ್ತಾಡಿ ಗ್ರಾಮದ ಮುಖ್ಯರಸ್ತೆಯಾಗಿರುವ ಪಂಬೆತ್ತಾಡಿಯಿಂದ ಕಾಂತುಕುಮೇರಿ ವರೆಗಿನ 6 ಕಿ.ಮೀ. ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಅನುದಾನ ಒದಗಿಸಬೇಕೆಂದು ಪಂಬೆತ್ತಾಡಿ ಗ್ರಾಮಸ್ಥರು ಸಚಿವ ಅಂಗಾರರನ್ನು ವಿನಂತಿಸಿಕೊಂಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಸರಕಾರಕ್ಕೆ ಪತ್ರ ಬರೆದಿದ್ದಾರೆ.


” ಪಂಬೆತ್ತಾಡಿ-ಕಾಂತುಕುಮೇರಿ ರಸ್ತೆಯು 1912 ರ ಬ್ರಿಟಿಷ್ ರೆಕಾರ್ಡ್‌ನಲ್ಲಿಯೇ ಕಾರ್ಟ್‌ ರೋಡ್ ಎಂದು ಗುರುತಿಸಲಾಗಿರುವ ರಸ್ತೆ. ಈ ರಸ್ತೆಯ ಅಭಿವೃದ್ಧಿ ಬಹುಕಾಲದ ಬೇಡಿಕೆಯಾಗಿದ್ದು, ಈಗ ಪೂರ್ಣ ಹದಗೆಟ್ಟು ಹೋಗಿದೆ. ಪಂಬೆತ್ತಾಡಿ ಗುಡ್ಡಗಾಡು ಪ್ರದೇಶವಾಗಿರುವುದರಿಂದ ಇಲ್ಲಿ ಕಾಂಕ್ರೀಟ್ ರಸ್ತೆಯೇ ಆಗಬೇಕಾಗಿದೆ. 4 ಕೋಟಿ ರೂ. ಮಂಜೂರಾದರೆ 6 ಕಿ.ಮೀ. ಉದ್ದ ರಸ್ತೆ ಅಭಿವೃದ್ಧಿ ಮಾಡಬಹುದು” ಎಂದು ಪಂಬೆತ್ತಾಡಿ ಸೊಸೈಟಿ ಉಪಾಧ್ಯಕ್ಷ ಕುಲದೀಪ್ ಸುತ್ತುಕೋಟೆಯವರ ನೇತೃತ್ವದಲ್ಲಿ ಮೇ.8 ರಂದು ಸಚಿವ ಅಂಗಾರರನ್ನು ಕಂಡ ಊರವರ ನಿಯೋಗ ಒತ್ತಾಯಿಸಿತು.
ಇದಕ್ಕೆ ಒಪ್ಪಿಗೆ ಸೂಚಿಸಿದ ಅಂಗಾರರು, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮುಖ್ಯಮಂತ್ರಿಗೆ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಪತ್ರ ನೀಡಿದ್ದಾರೆ.
ಊರವರ ನಿಯೋಗದಲ್ಲಿ ಸೊಸೈಟಿ ನಿರ್ದೇಶಕ ವೆಂಕಪ್ಪ ಪೂಜಾರಿ, ವಿಶ್ವನಾಥ ಜಾಕೆ, ರತಿದೇವಿ ಜಾಕೆ, ದಿನೇಶ್ ಪಾಟಾಜೆ, ಗಣೇಶ್ ಭೀಮಗುಳಿ, ನೆಗಳಗುಂಡಿ ಗಣೇಶ್ ಭಟ್, ಪರಮೇಶ್ವರ ಗೋಳ್ಯಾಡಿ, ದೀಪಕ್ ಪಾಟಾಜೆ, ಮೋಹನ್ ಪಿಳ್ಳೆ, ಅರ್ಜುನ್, ಗಂಗಾಧರ ಬಂಗೇರ, ಪ್ರಮೋದ್ ಜಿ.ಬಿ., ಶಿವಪ್ರಸಾದ್ ಬಾಬ್ಲುಬೆಟ್ಟು, ಸುರೇಶ್ ಬೆಳಗಜೆ, ಜಯರಾಮ ಜಾಕೆ, ಬೆಳ್ಳಿಯಪ್ಪ ಗೌಡ ಕಲ್ಚಾರು, ಗಣೇಶ್ ಕೋಟೆಗುಡ್ಡೆ, ಗಣೇಶ್ ಕಲ್ಚಾರು, ಉಮೇಶ್ ಮಠ, ಅನಿತಾ ಸುತ್ತುಕೋಟೆ, ಗೀತಾ ಜಾಕೆ, ರಾಕೇಶ್ ಜಾಕೆ, ವಿಮಲ ಬೆಳಗಜೆ, ಅರುಣ್ ಪಿಳ್ಳೆ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.