ಮಹಿಳಾ ವಿಭಾಗದಲ್ಲಿ ಅನಾಯಾಸವಾಗಿ ಪ್ರಶಸ್ತಿ ಗೆದ್ದ ಕೇರಳ ಪೊಲೀಸ್
ಎಸ್.ಆರ್.ಎಂ. ಚೆನ್ನೈ ದ್ವಿತೀಯ
ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ಶಿಪ್ ನ ಕೊನೆಯ ದಿನವಾದ ಇಂದು ನಡೆದ ಮಹಿಳೆಯರ ವಿಭಾದ ಫೈನಲ್ ಪಂದ್ಯದಲ್ಲಿ ಎಸ್.ಆರ್.ಎಂ. ಚೆನ್ನೈ ತಂಡವನ್ನು ಸೋಲಿಸುವ ಮೂಲಕ ಕೇರಳ ಪೊಲೀಸ್ ತಂಡ ಚಾಂಪಿಯನ್ ಶಿಪ್ ಗೆದ್ದುಕೊಂಡಿದೆ.
ಮೊದಲ ಸೆಟ್ ನಲ್ಲಿ ಆರಂಭದಿಂದಲೇ ಮುನ್ನಡೆ ಸಾಧಿಸಿದ ಕೇರಳ ಪೊಲೀಸ್ 25 – 21 ಅಂಕಗಳೊಂದಿಗೆ ವಿಜಯ ಸಾಧಿಸಿದರು.
ಎರಡನೇ ಸೆಟ್ ನಲ್ಲೂ ಇದೇ ನಿರ್ವಹಣೆ ತೋರಿ 25 – 18 ಅಂಕಗಳೊಂದಿಗೆ ವಿಜಯ ಸಾಧಿಸಿತು.
ಮೂರನೇ ಸೆಟ್ ಕೂಡಾ ಭಿನ್ನವಾಗಿರಲಿಲ್ಲ. ಕೊನೆಯ ಹಂತದಲ್ಲಿ ತಿರುಗಿ ಬೀಳುವ ಪ್ರಯತ್ನದಲ್ಲಿ ಎಸ್.ಆರ್.ಎಂ. ಯಶ ಕಾಣಲಿಲ್ಲ. 25 – 16 ಅಂಕದೊಂದಿಗೆ ಜಯಗೊಳಿಸಿ ಚಾಂಪಿಯನ್ ಶಿಪ್ ಕೂಡಾ ಗೆದ್ದರು.
ಕೇರಳ ಪೊಲೀಸ್ ಪರವಾಗಿ ಎಂದಿನಂತೆ ರೋಸ್ನಾ ಜೋನ್ ಉತ್ತಮ ನಿರ್ವಹಣೆ ತೋರಿದರೆ, ಎಸ್.ಆರ್.ಎಂ.ಪರವಾಗಿ ನಾಯಕಿ ಆದಿರಾ ರೋಯ್ ಉತ್ತಮ ಆಟವಾಡಿದರು.