Breaking News

ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್: ಕೆ.ಎಸ್.ಇ.ಬಿ. ಗೆ ಶಾಕ್ ನೀಡಿದ ಗುಜರಾತ್ ಸ್ಪೈಕರ್ಸ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ನೇರ ಸೆಟ್ ಗಳಿಂದ ಕೆ.ಎಸ್.ಇ.ಬಿ. ಮಣಿಸಿದ ಗುಜರಾತ್ ತಂಡಕ್ಕೆ ಮೂರನೇ ಸ್ಥಾನ

ಮಳೆ ಹಿನ್ನೆಲೆಯಲ್ಲಿ ಪಂದ್ಯ ಸ್ಥಗಿತ; ಗೆಲುವಿನ ಎರಡು ಅಂಕಕ್ಕಾಗಿ 45 ನಿಮಿಷ ಕಾದ ಗುಜರಾತ್!

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಶನ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಮತ್ತು ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ಸಂಘಟನಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಐದು ದಿನಗಳ ಆಹ್ವಾನಿತ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್ ನ ಕೊನೆಯ ದಿನವಾದ ಇಂದು ಪುರುಷರ ವಿಭಾಗದ ಮೂರು ಮತ್ತು ನಾಲ್ಕನೇ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿ ಕೇರಳ ಸ್ಟೇಟ್ ಇಲೆಕ್ಟ್ರಿಕಲ್ ಬೋರ್ಡ್ ತಂಡದ ವಿರುದ್ಧ ಗುಜರಾತ್ ಯುನೈಟೆಡ್ ಇಂಡಿಯನ್ ಸ್ಪೈಕರ್ಸ್ 3-0 ಸೆಟ್ ಗಳಿಂದ ವಿಜಯಗಳಿಸಿದೆ.

 

ಹಲವು ಅಂತರ್ ರಾಷ್ಟ್ರೀಯ ಆಟಗಾರರನ್ನೊಳಗೊಂಡ ಇತ್ತಂಡಗಳೂ ಉತ್ತಮ ಆಟ ಪ್ರದರ್ಶಿಸಿ ಕಿಕ್ಕಿರಿದ ಗ್ಯಾಲರಿ ಪ್ರೇಕ್ಷಕರನ್ನು ರಂಜಿಸಿದರು.

ಮೊದಲ ಸೆಟ್ ನಿಂದ ಆರಂಭದಿಂದಲೇ ಮನಮೋಹಕ ಆಟ ಪ್ರದರ್ಶಿಸಿದ ಗುಜರಾತ್ ರಮಣ್ ಚೌಧರಿಯವರ ಶಕ್ತಿಶಾಲಿ ಸ್ಮಾಶ್ ಗಳ ಅಬ್ಬರದಿಂದ, ಹೇಮಂತ್ ಅವರ ಕರಾರುವಕ್ಕಾದ ಸರ್ವ್ ನಿಂದ ಅಂಕಗಳನ್ನು ಹೆಚ್ಚಿಸುತ್ತಾ ಅಂತಿಮವಾಗಿ 25 – 16 ಅಂಕಗಳಿಂದ ಪಂದ್ಯ ಗೆದ್ದಿತು.

ಎರಡನೇ ಸೆಟ್ ನಲ್ಲೂ ಆಕರ್ಷಕ ಆಟ ಪ್ರದರ್ಶಿಸಿದ ಗುಜರಾತ್ ತಂಡ ದ ಪರವಾಗಿ ಮನೋಜ್, ಹೇಮಂತ್, ರಮಣ್ ಚೌಧರಿ , ಶಫೀಕ್ ಆಟದ ಸಹಾಯದಿಂದ 25 – 19 ಅಂಕಗಳ ಅಂತರದಲ್ಲಿ ಸೆಟ್ ಗೆದ್ದಿತು.

ಮೂರನೇ ಸೆಟ್ ನಲ್ಲೂ ಮುನ್ನಡೆಯಲ್ಲಿದ್ದ ಗುಜರಾತ್ ಗೆ ಪಂದ್ಯದ ಉತ್ತರಾರ್ಧದ ಬಳಿಕ ಕೆ.ಎಸ್.ಇ.ಬಿ. ತೋರಿದ ಪ್ರತಿರೋಧದ ಆಟದ ಹಿನ್ನೆಲೆಯಲ್ಲಿ ಅಂಕದ ಗಳಿಕೆ 24 – 24 ಸಮಬಲವಾಗಿತ್ತು.

ಆದರೆ ಈ ಹಂತದಲ್ಲಿ ಸುರಿದ ದಿಢೀರ್ ಮಳೆಯಿಂದಾಗಿ ಆಟವನ್ನು ಸ್ಥಗಿತಗೊಳಿಸಲಾಯಿತು. 45 ನಿಮಿಷಗಳ ಬಳಿಕ ಆಟ ಪುನರಾರಂಭಗೊಂಡಾಗ ಸತತ ಎರಡು ಅಂಕ ತನ್ನದಾಗಿಸಿಕೊಂಡ ಗುಜರಾತ್ 26 – 24 ಅಂಕಗಳಿಂದ ಸೆಟ್ ಗೆದ್ದು 3-0 ಸೆಟ್ ಗಳ ಅಧಿಕಾರಯುತ ಗೆಲುವು ಪಡೆದು ಚಾಂಪಿಯನ್ ಶಿಪ್ ನ ತೃತೀಯ ಸ್ಥಾನಿಯಾಯಿತು. ಕೆ.ಎಸ್.ಇ.ಬಿ. ನಾಲ್ಕನೇ ಸ್ಥಾನಿಯಾಯಿತು. ವಿಜೇತರಿಗೆ ಪ್ರಶಸ್ತಿ ವಿತರಣೆಯಾದ ಬೆನ್ನಿಗೇ ಮತ್ತೆ ಧಾರಾಕಾರ ಮಳೆ ಆರಂಭಗೊಂಡಿದ್ದು ಪಂದ್ಯ ಮತ್ತೆ ಸ್ಥಗಿತಗೊಂಡಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.