ಕೆವಿಜಿ ಪಾಲಿಟೆಕ್ನಿಕ್ ನ ಸಿವಿಲ್ ವಿಭಾಗದ ಆಯ್ಕೆಶ್ರೇಣಿ ಉಪನ್ಯಾಸಕರಾಗಿ ವಿಭಾಗ ಮುಖ್ಯಸ್ಥರಾಗಿ ಮೂವತ್ತನಾಲ್ಕು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಸಿ ಚಿಕ್ಕಪುಟ್ಟೆ ಗೌಡರನ್ನು ಬೀಳ್ಕೊಡುವ ಸಮಾರಂಭವು ಕೆವಿಜಿ ಪಾಲಿಟೆಕ್ನಿಕ್ ನ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಶ್ರೀ ಜಯಪ್ರಕಾಶ್ ಕೆ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೆಕ್ಯಾನಿಕಲ್ ವಿಭಾಗದ ನಿವೃತ್ತ ವಿಭಾಗ ಮುಖ್ಯಸ್ಥ ದೇರಣ್ಣ ರೈಯವರು ಉಪಸ್ಥಿತರಿದ್ದು ಸನ್ಮಾನ ಕಾರ್ಯ ನೆರವೇರಿಸಿದರು. ಸಿವಿಲ್ ವಿಭಾಗದ ನಿಯೋಜಿತ ವಿಭಾಗ ಮುಖ್ಯಸ್ಥ ದೇವರಾಜ ಜಿ ಕೆ ಅಭಿನಂದನಾ ಭಾಷಣ ಮಾಡಿದರು. ಸಿವಿಲ್ ವಿಭಾಗದ ಶಿಕ್ಷಕ ನಾರಾಯಣ ತೊರಣಗಂಡಿ ಸನ್ಮಾನ ಪತ್ರ ವಾಚಿಸಿದರು.
ಶ್ರೀಮತಿ ಜಯಲಕ್ಷ್ಮಿ ಹಾಗೂ ಶ್ರೀಮತಿ ಪದ್ಮಾವತಿಯವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕ ರಂಗಸ್ವಾಮಿಯವರು ಸ್ವಾಗತಿಸಿ ಕಛೇರಿ ಸಿಬ್ಬಂದಿ ಶ್ರೀಮತಿ ಜಯಮಣಿಯವರು ವಂದಿಸಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಕಾರ್ಯಕ್ರಮ ನಿರ್ವಹಿಸಿದರು.