ಕೊಡಗು ದಕ್ಷಿಣ ಕನ್ನಡದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬ ತಂಡಗಳ ಮಧ್ಯೆ ಭಾಗಮಂಡಲದ ಕೊರಂಗಲ ನಾಡು ನಂಗಾರು ಕುಟುಂಬ ಆಯೋಜನೆ ಮಾಡಿದ್ದ ದ್ವಿತೀಯ ವರ್ಷದ ಕಬ್ಬಡಿ ಪಂದ್ಯಾವಳಿಯಲ್ಲಿ ಪೆರಾಜೆಯ ಕುಂಬಳಚೇರಿಮನೆ ತಂಡ ಭಾಗವಹಿಸಿ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ಗಳಿಸಿಕೊಂಡಿತು. ಮಡಿಕೇರಿಯ ಪುದಿಯನೆರವನ ಕುಟುಂಬ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿತು.
ಪೆರಾಜೆಯ ಮಜಿಕೋಡಿ ತಂಡ ಮೂರನೇ ಹಾಗೂ ಸುಳ್ಯದ ಕುದ್ಪಾಜೆ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಕುಂಬಳಚೇರಿ ಮನೆ ತಂಡದ ತಾರೇಶ್ ಬೆಸ್ಟ್ ಆಲ್ರೌಂಡರ್ ಹಾಗೂ ಪ್ರದೀಪ್ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಪಡೆದು ಕೊಂಡರು.
ಪಂದ್ಯಾವಳಿಯ ಮಹಿಳಾ ವಿಭಾಗದ ಕಬ್ಬಡಿಯಲ್ಲಿ ಪೆರಾಜೆಯ ಪೆರುಮುಂಡ ತಂಡ ಪ್ರಥಮ ಸ್ಥಾನ ಪಡೆದು ಕೊಂಡರೆ ಆತಿಥೇಯ ನಂಗಾರು ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿತು. ಪಂದ್ಯಾವಳಿಯಲ್ಲಿ ೩೭ ಕುಟುಂಬ ತಂಡಗಳು ಭಾಗವಹಿಸಿದ್ದವು.