ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಿ-೮ ಇಂಜಿನಿಯರಿಂಗ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಮೇ. 7 ರಂದು ಕೆ.ವಿ.ಜಿ. ಆಟದ ಮೈದಾನದಲ್ಲಿ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ., ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿ ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು ಹಾಗೂ ವಿದ್ಯಾರ್ಥಿಗಳ Flashmob Dance ತಂಡಕ್ಕೆ ನಗದು ಬಹುಮಾನ ನೀಡಿ ಪ್ರೊತ್ಸಾಹಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಶ್ರೀಧರ್ ಕೆ. ವಿದ್ಯಾರ್ಥಿಗಳನ್ನುದ್ದೇಶಿಸಿ ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಕಿವಿ ಮಾತು ಹೇಳಿದರು. ಪಂದ್ಯಾಟದಲ್ಲಿ ಪ್ರಥಮ ಸ್ಥಾನಿಯಾಗಿ ಎಂ.ಬಿ.ಎ. ಮ್ಯಾನೇಜರ್ಸ್ ತಂಡ ಹಾಗೂ ದ್ವಿತೀಯ ಸ್ಥಾನಿಯಾಗಿ ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್ Vikings ತಂಡವು ಪಡೆದುಕೊಂಡಿತು. ೨೧ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು ಕ್ರಿಕೆಟ್ ಟೂರ್ನಮೆಂಟ್ ಹೊನಲು ಬೆಳಕಿನ ಪಂದ್ಯಾಟವಾಗಿತ್ತು.
ಈ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಹಾಗೂ ಪಂದ್ಯಾಟದ ಚೇರ್ಮೆನ್ ಡಾ. ಉಜ್ವಲ್ ಯು.ಜೆ., ಪಂದ್ಯಾಟದ ಸಂಯೋಜಕರಾದ ಪ್ರೊ. ಅಜಿತ್ ಬಿ.ಟಿ., ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ ವಿ., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಮಾಶಂಕರ್ ಕೆ.ಎಸ್., ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಅರುಣ್ ಕುಮಾರ್ ಹೆಚ್., ಟ್ರೈನಿಂಗ್ & ಪ್ಲೇಸ್ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ., ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ಡಾ. ಸವಿತಾ ಸಿ.ಕೆ., ಡಾ. ಪ್ರಜ್ಞ ಎಂ.ಆರ್., ಪ್ರೊ. ರೇಖಾ ಎಂ.ಬಿ., ಪ್ರೊ. ಮನೋಹರ್ ಎ.ಎನ್., ಪ್ರೊ. ಇಮ್ಯಾಕ್ಯುಲೇಟ್ ಮೇರಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಭಾಸ್ಕರ್ ಎಸ್.ಬಿ. ಹಾಗೂ ಶ್ರೀ ತೀರ್ಥವರ್ಣ, ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಎಲ್ಲಾ ಸದಸ್ಯರುಗಳು ಪಂದ್ಯಾಕೂಟದ ಯಶಸ್ಸಿಗೆ ಸಂಪೂರ್ಣ ಸಹಕರಿಸಿದರು. ಈ ಸಂದರ್ಭದಲ್ಲಿ ನಾಸಿಕ್ ಬ್ಯಾಂಡ್ ಹಾಗೂ ವಿದ್ಯಾರ್ಥಿಗಳ ಡಾನ್ಸ್ ಕಾರ್ಯಕ್ರಮ ನಡೆಯಿತು.