ಕೊಲ್ಲಮೊಗ್ರ ಗ್ರಾಮದ ಗಡಿಕಲ್ಲು ನಾಗಪ್ಪ ಗೌಡರ ಪುತ್ರಿ ರೂಪಶ್ರೀ ಅವರ ವಿವಾಹವು ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಗೋಪಿನಾಥ್ ಅವರ ಪುತ್ರ ಜಗದೀಶರೊಂದಿಗೆ ಎ.27 ರಂದು ಸುಳ್ಯದಲ್ಲಿ ವಿವಾಹ ನೋಂದಣೆ ಮಾಡಿಸಿ ದೇವಸ್ಥಾನವೊಂದರಲ್ಲಿ ಮದುವೆ ಯಾಗಿರುವುದಾಗಿ ವರದಿಯಾಗಿದೆ.
ಅವರು ಪರಸ್ಪರ ಪ್ರೀತಿಸುತ್ತಿದ್ದ ರೆಂದು ತಿಳಿದುಬಂದಿದ್ದು, ವಧು ರೂಪಶ್ರೀಯವರಿಗೆ ಅರಂತೋಡಿನ ಯುವಕನೊಂದಿಗೆ ಮದುವೆ ನಿಗದಿಯಾಗಿದ್ದು ಎರಡೂ ಕಡೆ ಯಿಂದಲೂ ಮದುವೆಯ ಆಮಂತ್ರಣ ಹಂಚಲಾಗಿತ್ತೆಂದೂ ತಿಳಿದುಬಂದಿದೆ.