ಮಾವಿನಕಟ್ಟೆ ಬಳಿ ಲಾರಿಯಲ್ಲಿದ್ದ ರೋಲರ್ ಗೆ ವಿದ್ಯುತ್ ಕಂಬಕ್ಕೆ ಎಳೆದು ಕಟ್ಟಿದ ಸ್ಟೇ ವಯರ್ ಸಿಕ್ಕಿ ಹಾಕಿಕೊಂಡು ರಸ್ತೆ ಬ್ಲಾಕ್ ಆದ ಘಟನೆ ಇಂದು ನಡೆದಿದೆ.
ಗುತ್ತಿಗಾರು ಕಡೆಯಿಂದ ಬಂದ ಲಾರಿಯಲ್ಲಿ ರೋಲರ್ ಇದ್ದು ಅದರ ಮೇಲ್ಬಾಗಕ್ಕೆ ಸ್ಟೇ ವಯರ್ ಗೆ ಸಿಕ್ಕಿ ಹಾಕಿಕೊಂಡು ವಿದ್ಯುತ್ ಕಂಬ ರಸ್ತೆಗೆ ವಾಲಿದೆ. ಪರಿಣಾಮ ವಿದ್ಯುತ್ ಲೈನ್ ನೇತಾಡುತಿದೆ. ಕೆಲ ಸಮಯ ರಸ್ತೆ ಬ್ಲಾಕ್ ಆಗಿದ್ದು ಮೆಸ್ಕಾ ಸಿಬ್ಬಂದಿಗಳು ಬಂದು ದುರಸ್ತಿ ಮಾಡಿದರೆಂದು ತಿಳಿದು ಬಂದಿದೆ.