ಸುಳ್ಯ ತಾಲೂಕಿನ ಗಡಿಪ್ರದೇಶ, ಕಾಸರಗೋಡು ದೇಲಂಪಾಡಿ ಪರಪ್ಪೆಯಲ್ಲಿ ಸುಮಾರು ೨೫ ಲಕ್ಷ ರೂ ವೆಚ್ಚದಲ್ಲಿ ಭವ್ಯವಾದ ವಿಷ್ಣುಮೂರ್ತಿ ರಕ್ತೇಶ್ವರಿ ದೈವಸ್ಥಾನ ನಿರ್ಮಾಣಗೊಂಡಿದ್ದು ಪ್ರತಿಷ್ಠಾ ಮಹೋತ್ಸವಕ್ಕೆ ಮೇ. ೭ ಮತ್ತು ೮ರಂದು ಅದ್ದೂರಿಯಾಗಿ ನಡೆಯಿತು.
ಮೇ.8ರಂದು ದೈವದ ಭಂಡಾರ ತೆಗೆದ ಬಳಿಕ ದೈವಗಳ ತೊಡಂಙಲ್. ರಾತ್ರಿ ಭಜನಾ ಕಾರ್ಯಕ್ರಮ ಸ್ಥಳೀಯರಿಂದ, ಅನ್ನದಾನ ನಡೆದ ಬಳಿಕ ಶ್ರೀ ಪೊಟ್ಟನ್ ದೈವದ ನೇಮೋತ್ಸವ ನಡೆಯುವುದು. ಮೇ. ೯ರಂದು ಶ್ರೀ ರಕ್ತೇಶ್ವರಿ ದೈವದ ನೇಮೊತ್ಸವ, ಶ್ರೀ ವಿಷ್ಣುಮೂರ್ತಿ ದೈವದ ನೇಮೋತ್ಸವ ಬಳಿಕ ಅನ್ನದಾನ ಜರುಗಿತು.
ಊರ ಹಾಗೂ ಪರವೂರ ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.