ವಿನ್ನರ್- ಏಣಾವರ ಟೈಟಾನ್ಸ್, ರನ್ನರ್ ಅಪ್ ಯುನೈಟೆಡ್ ಅರಂಬೂರು
ಆಲೆಟ್ಟಿ ಪ್ರೀಮಿಯರ್ ಲೀಗ್ (ಎ.ಪಿ.ಎಲ್) ಕ್ರಿಕೆಟ್ ಪಂದ್ಯಾಟ ಕೋಲ್ಚಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೆ.6 ರಿಂದ 8 ರ ತನಕ ನಡೆಯಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದ ಸಮಾರೋಪ ಸಮಾರಂಭವು ಮೆ.8 ರಂದು ಎ.ಪಿ.ಎಲ್. ಸಮಿತಿ ಅಧ್ಯಕ್ಷ ನ್ಯಾಯವಾದಿ ಸತೀಶ್ ಕುಂಬಕ್ಕೋಡು ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಉಪಾಧ್ಯಕ್ಷ ಕರುಣಾಕರ ಹಾಸ್ಪರೆ, ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು, ಸದಸ್ಯೆ ಗೀತಾ ಕೋಲ್ಚಾರು, ಪಂ.ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ಪಂ.ಸದಸ್ಯೆ ಕುಸುಮ ಬಿಲ್ಲರಮಜಲು ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ನಡೆದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ವಿನ್ನರ್ ಏಣಾವರ ಟೈಟಾನ್ಸ್ , ರನ್ನರ್ ಅಪ್ ಯುನೈಟೆಡ್ ಅರಂಬೂರು ಪ್ರಶಸ್ತಿ ಗಳಿಸಿಕೊಂಡಿತು.