ಅರಂತೋಡು ಗ್ರಾಮದ ತೋಟಂಪಾಡಿ ಉಳ್ಳಾಕುಲು ದೈವಸ್ಥಾನದಲ್ಲಿ ಮೇ. ೧೩ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಸದಸ್ಯರು, ದುರ್ಗಮಾತಾ ಭಜನಾ ಮಂಡಳಿಯ ಸದಸ್ಯರು, ಅರಂತೋಡು ಭಕ್ತಾದಿಗಳಿಂದ ಶ್ರಮದಾನ ಕಾರ್ಯ ನಡೆಯಿತು. ಮಹಿಳಾ ತಂಡಗಳಿಂದ ತೋಟಂಪಾಡಿ ಬ್ರಹ್ಮಕಲಶೋತ್ಸವಕ್ಕೆ ಉಪ್ಪಿನಕಾಯಿ ತಯಾರಿಕೆಗಾಗಿ ಮಾವಿನ ಕಾಯಿಯನ್ನು ಕೊಯ್ಯಲಾಯಿತು.