ಕೊಲ್ಲಮೊಗ್ರು: ಬೃಹತ್ ನದಿ ಸ್ವಚ್ಚತಾ ಅಭಿಯಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ವಿಪತ್ತು ನಿರ್ವಹಣಾ ತಂಡ ಮುಂದಾಳುತ್ವದಲ್ಲಿ  20 ಕಿ.ಮೀ ನದಿಯ ಸ್ವಚ್ಛತೆ

ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ನೇತೃತ್ವದಲ್ಲಿ ಕೊಲ್ಲಮೊಗ್ರು ಗ್ರಾ.ಪಂ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಇಂದು ಕಲ್ಮಕಾರಿನ ಕೂಜುಮಲೆ, ಕಡಮಕಲ್ಲು ನಿಂದ ಹರಿಹರ ತನಕ 20 ಕಿ.ಮೀ ಬೃಹತ್ ನದಿ ಸ್ವಚ್ಚತಾ ಅಭಿಯಾನ ನಡೆಯಿತು.
ಕಡಮಕಲ್ಲು ನಿಂದ ಹರಿದು ಬರುವ ಹೊಳೆ ಮತ್ತು ಕೂಜುಮಲೆಯಿಂದ ಬರುವ ಹೊಳೆ ಉಮಗದಿಂದ ತಲಾ 5 ಕಿ.ಮೀ ನಂತೆ. ಹಾಗೂ ಕಲ್ಮಕಾರಿನಿಂದ ಎರಡೂ ನದಿಗಳು ಸೇರಿ ಹರಿಯುವ ಗೌರಿ ಹೊಳೆ ಹರಿಹರದವರೆಗೆ 10 ಕಿ.ಮೀ ಹೀಗೆ ಒಟ್ಟಾಗಿ 20 ಕಿ. ಮೀ ಸ್ವಚ್ಚತಾ ಕಾರ್ಯ ನಡೆಯಿತು . ಗಡಿಕಲ್ಲಿನ ಶ್ರೀ ಮಹಾವಿಷ್ಣು ಮೂರ್ತಿ ಸನ್ನಿದಾನದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಕುಂಞೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ತೆಂಗಿನಕಾಯಿ ಒಡೆದರು. ನಮ್ಮೂರ ಕರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಾದವ ಚಾಂತಾಳ,
ಮೇಲ್ವಿಚಾರಕರಾದ ಅಶ್ವಥ್ ಯಾಲದಾಳು, ಡ್ಯಾನಿ ಯಾಲದಾಳು, ಮೋಹಿನಿ ಕಟ್ಟ, ಚಂದ್ರಶೇಖರ ಕೊಂದಾಳ, ದಿನೇಶ್ ಮಡ್ತಿಲ, ಜಯಪ್ರಕಾಶ್ ಪರಿಯಂಬಿ, ವೇದಾವತಿ ಮುಳ್ಳುಬಾಗಿಲು ಸುರೇಶ್ ಪಿ ಎಸ್, ಒಕ್ಕೂಟ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

ಬಾಲಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮಣಿಕಂಠ ಕಟ್ಟ ವಂದಿಸಿದರು. ವಿಪತ್ತು ನಿರ್ವಹಣಾ ತಂಡದ ಸತೀಶ್ ಟಿ ಎನ್, ಮಣಿಕಂಠ ಕಟ್ಟ, ಬಾಲಸುಬ್ರಹ್ಮಣ್ಯ ಹರಿಹರ, ಯಶವಂತ ಕಾಜಿಮಡ್ಕ, ಲಕ್ಷ್ಮಣ ನವಗ್ರಾಮ, ಸದಾನಂದ ಕಟ್ಟ, ಶೀನ ಕಟ್ಟ, ಹರ್ಷ ಅಡ್ನೂರು ಮಜಲು ನೇತೃತ್ವ ನೋಡಿಕೊಂಡರು.

ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾಗಿದ್ದು ದೊಡ್ಡತೋಟ ವಲಯ ಮೇಲ್ವಿಚಾರಕರಾಗಿ ವರ್ಗಾವಣೆಗೊಂಡ ಸೀತಾರಾಮ ಅವರನ್ನು ಗೌರವಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.