ನಕಲಿ ಜಾತಿ ಪ್ರಮಾಣಪತ್ರ ತಡೆಗೆ ಆಗ್ರಹಿಸಿ ಸುಳ್ಯ ತಾಲೂಕು ಮೊಗೇರ ಸಂಘ ಮತ್ತು ದಲಿತ ಸಂಘಟನೆಯ ವತಿಯಿಂದ ಸುಳ್ಯ ತಹಶೀಲ್ದಾರರಿಗೆ ಮನವಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ನಕಲಿ ಜಾತಿ ಪ್ರಮಾಣಪತ್ರ ತಡೆಗೆ ಪರಿಶಿಷ್ಟರ ನಡೆ ತಹಶೀಲ್ದಾರ್ ಕಚೇರಿ ಕಡೆಗೆ ಎಂಬ ಕಾರ್ಯಕ್ರಮದಡಿಯಲ್ಲಿ ಸುಳ್ಯ ತಾಲೂಕು ಮುಗೇರ ಸಂಘಟನೆ ಮತ್ತು ದಲಿತ ಸಂಘಟನೆಗಳ ವತಿಯಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಆವರಣದಿಂದ ಜಾಥಾ ಮೂಲಕ ತೆರಳಿ ಸುಳ್ಯ ತಹಶೀಲ್ದಾರರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ಇಂದು ಸುಳ್ಯ ತಾಲೂಕು ಕಚೇರಿ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುಗೇರ ಸಂಘದ ರಾಜ್ಯ ಸಮಿತಿ ಸಂಚಾಲಕ ನಂದರಾಜ್ ಸಂಕೇಶ್ ಮಾತನಾಡಿ, ಅಸ್ಪೃಶ್ಯ ಮೊಗೇರ ಜಾತಿಯವರಿಗೆ ಕೊಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಅಸ್ಪೃಶ್ಯ ಜಾತಿಯವರಲ್ಲದ ಮತ್ತು ರಾಜ್ಯದ ಹಿಂದುಳಿದ ಜಾತಿ ಪಟ್ಟಿಯಲ್ಲಿರುವ ಪ್ರವರ್ಗ-೧ರ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿದರು. ಹಾಗೂ ಮೇ ೨೩ರಂದು ಸುಳ್ಯ ತಾಲೂಕಿನಾದ್ಯಂತ ಇರುವ ನಮ್ಮ ಸಮುದಾಯದ ಸಹಸ್ರಾರು ಜನರನ್ನು ಸೇರಿಸಿ ಮಂಗಳೂರು ಜಿಲ್ಲಾಧಿಕಾರಿ ಕಛೇರಿಗೆ ಪ್ರತಿಭಟನಾ ರ್‍ಯಾಲಿಯಲ್ಲಿ ತೆರಳಿ ಆಗ್ರಹ ಪಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುಂದರ ಪಾಟಾಜೆ, ಸಂಘಟನೆಯ ಮುಖಂಡರಾದ ಅಚ್ಚುತ ಮಲ್ಕಜೆ ಮಾತನಾಡಿದರು.
ನಂತರ ತಹಶೀಲ್ದಾರ್ ಕು. ಅನಿತಾಲಕ್ಷ್ಮಿ ರವರಿಗೆ ಮನವಿಯನ್ನು ನೀಡಲಾಯಿತು. ಮನವಿಯಲ್ಲಿ ಅಸ್ಪೃಶ್ಯ ಜಾತಿಯವರಲ್ಲದ ಮತ್ತು ರಾಜ್ಯದ ಹಿಂದುಳಿದ ಜಾತಿ ಪಟ್ಟಿಯಲ್ಲಿರುವ ಪ್ರವರ್ಗ-೧ರ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬಾರದು, ಮೋಸದಿಂದ ಮೊಗೇರ ಎಂಬ ಸಮಾನಾಂತರ ಜಾತಿಸೂಚಕ ಶಬ್ದದ ದುರುಪಯೋಗ ಮಾಡಿಕೊಂಡು ಪರಿಶಿಷ್ಟ ರಾದ ನಮ್ಮ ಜಾತಿಯ ಜನರಿಗೆ ಸಿಗುವ ಮೀಸಲಾತಿ ಸೌಲಭ್ಯಗಳನ್ನು ಕಳೆದ ಮೂರು ದಶಕಗಳಿಂದ ಅವಿ ರಹಿತವಾಗಿ ಶಿಕ್ಷಣ, ಸರಕಾರಿ ಉದ್ಯೋಗ, ಆರ್ಥಿಕವಾಗಿ ಸಾಲ ಸೌಲಭ್ಯ, ಹಾಗೂ ರಾಜಕೀಯ ಮೀಸಲಾತಿ ಪ್ರತಿನಿಧಿತ್ವ ಮುಂತಾದ ಎಲ್ಲಾ ಮೀಸಲಾತಿ ಸೌಲಭ್ಯಗಳನ್ನು ಪಡೆದುಕೊಂಡಿದ್ದಕ್ಕೆ ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ೧೯೮೯ ರ ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹೂಡಿ ಸರಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮೀನುಗಾರ ಮೊಗೇರ ತಪ್ಪಿತಸ್ಥರನ್ನು ತಕ್ಕ ಶಿಕ್ಷೆಗೆ ಗುರಿಪಡಿಸಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ಉಲ್ಲೇಖಿಸಲಾಗಿತ್ತು. ಮನವಿಯನ್ನು ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಿಗೆ, ಹಾಗೂ ರಾಜ್ಯಪಾಲರಿಗೆ, ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸುಳ್ಯ ತಾಲೂಕು ತಹಶೀಲ್ದಾರರ ಮುಖಾಂತರ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಶಂಕರ ಪೆರಾಜೆ, ಕೇಶವ ಮಾಸ್ಟರ್ ಹೊಸಗದ್ದೆ, ಜಿ ಜಗನ್ನಾಥ್ ಜಯನಗರ, ವಿಶ್ವನಾಥ ಅಲೆಕ್ಕಾಡಿ, ಬುದ್ಧ ಶಂಕೇಶ್, ಕೃಷ್ಣ ಸುಳ್ಳಿ, ಸೀನಪ್ಪ ಬಯಂಬು, ಹರಿಶ್ಚಂದ್ರ ಹಾಸನಡ್ಕ, ಪ್ರಕಾಶ್ ಬಂಗ್ಲೆಗುಡ್ಡೆ, ಪ್ರಕಾಶ್ ಪಾತಾಜೆ, ರಮೇಶ್ ಕಾನಾವು, ಮಧುಸೂದನ ಬೂಡು, ಅಚ್ಚುತ ಗುತ್ತಿಗಾರು, ಸೀನ ಬಾಳಿಲ, ಮಾಧವ ಐವರ್ನಾಡು, ಸಂಜಯ್ ಕುಮಾರ್ ಪೈಚಾರು, ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಳ್ಳತಡ್ಕ, ಕಾರ್ಯದರ್ಶಿ ಬಾಳಪ್ಪ ಕಳಂಜ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.