ಕೊಯನಾಡು ಶ್ರೀಮಹಾಗಣಪತಿ ದೇವಸ್ಥಾನ, ಗಣೇಶ್ ಯುವ ಬಳಗ ಕೊಯನಾಡು, ಇದರ ಸಹಯೋಗದೊಂದಿಗೆ ಫ್ಯೂಶನ್ ಇನ್ ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇದರ ವತಿಯಿಂದ ಚಿಣ್ಣರ ಚಿತ್ತಾರ ಮಕ್ಕಳ ಬೇಸಿಗೆ ಶಿಬಿರವು ಮೇ.1 ರಿಂದ ಆರಂಭಗೊಂಡು ಮೇ.8 ರವರೆಗೆ ನಡೆಯಿತು.
ಚಿಣ್ಣರ ಮೇಳ ಸಮಾರೋಪದ ಅಧ್ಯಕ್ಷತೆಯನ್ನು ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಪಿ.ಡಿ. ವಿಶ್ವನಾಥ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷ ಜಗದೀಶ್ ಪರಮಲೆ, ವಿಜಯ ಕುಮಾರ್ ಅರುಣಗುಂಜ, ಚಲನ ಚಿತ್ರ ನಿರ್ದೇಶಕ ಕುಮಾರ್ ಹೆಚ್, ಮಹೇಶ್ ಎಣ್ಮೂರು, ವಿನೋದ್ ಮೂಡುಗದ್ದೆ, ಶಿಬಿರದ ನಿರ್ದೇಶಕರಾದ ವಸಂತ ಆಚಾರ್ಯ ಕಾಯರ್ತೋಡಿ, ಗ್ರಾ.ಪಂ. ಸದಸ್ಯೆ ರಮಾದೇವಿ ಕಳಗಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸನ್ನ ಐವರ್ನಾಡು, ವಿನೋದ್ ಅರಂಬೂರು, ಅನುಶ ಬೆಟ್ಟಂಪಾಡಿ, ಸತೀಶ್ ಕಳಂಜ, ಮಹೇಶ್ ಎಣ್ಮೂರು, ಸತೀಶ್ ಪಂಜ, ಚರಣ್ ರಾಜ್ ಮೂರ್ನಾಡು, ಕೌಶಿಕ್ ಕೊಡಗು, ವಿನೋದ್ ಮೂಡಗದ್ದೆ, ರಾಜ್ ಮುಖೇಶ್, ವಸಂತ ಆಚಾರ್ಯ ಕಾಯರ್ತೋಡಿ ತರಬೇತಿ ನೀಡಿದರು.
ರಾಜ್ ಮುಖೇಶ್ ಕಾರ್ಯಕ್ರಮ ನಿರೂಪಿಸಿದರು.