ಕೆ.ವಿ.ಜಿ. ಮೆಡಿಕಲ್ ಕಾಲೇಜ್ : ಪದವಿ ಪ್ರಧಾನ ಸಮಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

2022 ನೇ ಸಾಲಿನ ಪದವಿ ಪ್ರದಾನ ಸಮಾರಂಭ ಕಾರ್ಯಕ್ರಮ ಎಪ್ರಿಲ್ 19 ರಂದು ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವು ರೇಡಿಯೋ ಡಯಾಗ್ನಾಸಿಸ್ ವಿಭಾಗದ ಡಾ.ಅರುಣಾ ಪೈಲೂರ್‌ರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.
ಸಂಸ್ಥೆಯ ಡೀನ್‌ಡಾ. ನೀಲಾಂಬಿಕೈ ನಟರಾಜನ್ ಸ್ವಾಗತಿಸಿ, ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದಡಾ. ಸಿ.ರಾಮಚಂದ್ರ ಭಟ್ ವಿದ್ಯಾರ್ಥಿಗಳಿಗೆ ಪ್ರಮಾಣವಚನವನ್ನು ಬೋಧಿಸಿದರು. ಮುಖ್ಯಅತಿಥಿಯಾಗಿಡಾ. ಸಿ. ರಾಮಚಂದ್ರ, ಡೈರೆಕ್ಟರ್‌ಕಿದ್ವಾಯಿ ಸ್ಮಾರಕಗಂಥಿ ಸಂಸ್ಥೆ ಬೆಂಗಳೂರು ಇವರು ಭಾಗವಹಿಸಿದ್ದರು. ಪೆಥಾಲಜಿ ವಿಭಾಗದ ಪ್ರಾಧ್ಯಾಪಕಿಡಾ. ನವ್ಯ ಬಿ.ಎನ್ ಅತಿಥಿಗಳನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿಕಾಲೇಜಿನ ಮ್ಯಾಗಜಿನ್ ಬಿಡುಗಡೆಗೊಳಿಸಲಾಯಿತು. ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಯಿತು. ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ವಿಜೇತರನ್ನುಅಭಿನಂಧಿಸಲಾಯಿತು. ವೇದಿಕೆಯಲ್ಲಿಅಕಾಡೆಮಿಆಫ್ ಲಿಬರಲ್‌ಎಜುಕೇಶನ್‌ನ ಸದಸ್ಯರಾದ ಶ್ರೀಮತಿ ಶೋಭಾಚಿದಾನಂದ, ಶ್ರೀ. ಅಕ್ಷಯ್ ಕೆ ಸಿ, ಡಾ. ಸುಬ್ರಮಣ್ಯ ಎಂ.ಪಿ, ಖಿಡಿಚಿumಚಿ ಆiಡಿeಛಿಣoಡಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ಮತ್ತು ಪೋಷಕರು ಉಪಸ್ಥಿತರಿದ್ದರು. ಕುಲದೀಪ್ ಮತ್ತು ಅನುರಾಧ ಕಾಮತ್‌ ಕಾರ್ಯಕ್ರಮ ನಿರೂಪಿಸಿ, ವೈದ್ಯಕೀಯಅಧೀಕ್ಷಕರಾದಡಾ. ಗೋಪಿನಾಥ್ ಪೈ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.