ಪೆರಾಜೆಯ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಂಘ ಇದರ ಆಶ್ರಯದಲ್ಲಿ ಪೆರಾಜೆಯ ಪಯಸ್ವಿನಿ ಸೇತುವೆ ಬಳಿ ಈಜು ತರಬೇತಿ ಶಿಬಿರ ಮೇ.೩ ಆರಂಭಗೊಂಡಿದ್ದು, ಮೇ.೧೦ರಂದು ಸಮಾಪನಗೊಂಡಿತು.
ರಾಷ್ಟ್ರ ಮಟ್ಟದ ಈಜು ತರಬೇತುದಾರರಿಂದ ಶಿಬಿರ ನಡೆಯಿತು. ಒಟ್ಟು ೩೧ ಮಂದಿ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಈಜು ತರಬೇತಿ ಪಡೆದುಕೊಂಡರು.
ಪೆರಾಜೆ ದೇವಸ್ಥಾನದ ವಠಾರದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೆರಾಜೆ ಶ್ರೀ ಶಾಸ್ತಾವು ದೇವಳದ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಟಕರಾದ ಪೆರಾಜೆ ಅಯ್ಯಪ್ಪ ದಿಪೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಪೆರುಮುಂಡ, ನಿರ್ದೇಶಕ ರಾದ ಯುವಾನಂದ ಪೆರಂಗಜೆ, ತರಬೇತಿದಾರ ಯಶವಂತ ಪುತ್ತೂರು ಹಾಗೂ ಪೋಷಕರು ಇದ್ದರು.