ಸುಳ್ಯದವರೆಲ್ಲ ಹೇಳಿ ಆಯಿತು..
ಈಗ ಚಿತ್ರ ನಟ ಅನಿರುದ್ಧ್ ಹೇಳಿದ್ದಾರೆ… ನೋಡಿ…
ಸುಳ್ಯ ನಗರದ ಕಸದ ಸಮಸ್ಯೆ ಇಂದು ನಿನ್ನೆಯದಲ್ಲ. ಕಸವನ್ನು ಕಲ್ಚೆರ್ಪೆಯಲ್ಲಿ ಕೊಂಡು ಹೋಗಿ ಅಲ್ಲಿ ಕಸ ತುಂಬಿ ಹಾಕಲು ಜಾಗವಿಲ್ಲದೆ ಬಳಿಕ ಸುಳ್ಯ ನಗರ ಪಂಚಾಯತ್ನ ಎದುರಿನ ಶೆಡ್ ನಲ್ಲಿ ತುಂಬಿಸಲಾಯಿತು. ಈಗ ಅಲ್ಲಿ ಕೂಡಾ ಜಾಗ ಸಾಕಾಗದೆ ಪಂಚಾಯತ್ನ ಹಿಂಬದಿಯಲ್ಲಿ ಹಾಕಲಾಗುತ್ತಿದೆ. ಕಸದಿಂದ ನಗರ ಪಂಚಾಯತ್ ಆವರಣ ದುರ್ನಾತ ಬೀರುತ್ತಿದೆ.
ಈ ಕಸವನ್ನು ತೆಗೆದು ವಿಲೇಗೊಳಿಸಬೇಕೆಂದು ಸುಳ್ಯ ನಗರದ, ಸುಳ್ಯ ತಾಲೂಕಿನ ಜನರೆಲ್ಲ ಹೇಳಿ ಆಯಿತು. ಈಗ ಬೆಂಗಳೂರಿನ ಚಿತ್ರನಟ ಅನಿರುದ್ಧ ಹೇಳಿದ್ದಾರೆ. ಕೇಳಿ…