ಮರ್ಕಂಜದ ಅಳವುಪಾರೆ ಎಂಬಲ್ಲಿ ನಡೆಯುತ್ತಿರುವ ಕಲ್ಲು ಗಾಣಿಗಾರಿಕೆಗೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ ಇಂದು ಭೇಟಿ ನೀಡಿದ್ದಾರೆ.
ಮರ್ಕಂಜದ ಅಳವುಪಾರೆ ಎಂಬಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಡೈನೋಮೆಟಿಕ್ ಬಳಸಿ ಕಲ್ಲು ಒಡೆಯಲಾಗುತ್ತಿದೆ. ಡೈನೋಮೇಟಿಕ್ ಸ್ಪೋಟಿಸುವ ಸಂದರ್ಭ ಭೂಮಿ ಕಂಪನವಾಗಿ ಸ್ಥಳೀಯ ಮನೆಗಳು ಮತ್ತು ಸ್ಥಳೀಯ ದೇವಸ್ಥಾನ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಗೋಡೆಗಳು ಬಿರುಕು ಉಂಟಾಗಿದೆ ಎಂದು ಸ್ಥಳೀಯ ನಿವಾಸಿಗಳು ಮತ್ತು ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ, ಪಂಚಾಯತ್ ಗೆ ದೂರು ನೀಡಲಾಗಿತ್ತು. ಅದರಂತೆ ಇಂದು ತಹಶೀಲ್ದಾರ್ ಅನಿತಾಲಕ್ಷ್ಮೀ ಮರ್ಕಂಜ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಮತ್ತು ದೇವಸ್ಥಾನಕ್ಕೆ ಹಾಗೂ ಮನೆ ಬಿರುಕು ಬಿಟ್ಟಿರುವ ವೇದಾವತಿ ಎಂಬವರ ಮನೆಗೆ ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.