ಘನತ್ಯಾಜ್ಯ ಘಟಕ, ಸ್ಮಶಾನಕ್ಕೆ ಜಾಗ ಗುರುತು ಮಾಡಲು ನಿರ್ಣಯ
ಪೆರುವಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಮೇ.10 ರಂದು ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪಂಚಾಯತ್ ಗೆ ತ್ಯಾಜ್ಯ ವಿಲೇವಾರಿಗೆ ಸರಿಯಾದ ಜಾಗವಿಲ್ಲ.ತ್ಯಾಜ್ಯ ವಿಲೇವಾರಿ ಕಷ್ಟವಾಗುತ್ತಿದೆ.
ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಾರೆ.
ಕೋಳಿ ತ್ಯಾಜ್ಯ ,ಹಾಗೂ ಇತರ ಪ್ಲಾಸ್ಟಿಕ್ ವಸ್ತುಗಳನ್ನು ರಸ್ತೆ ಬದಿ ಬಿಸಾಡುತ್ತಾರೆ.
ಕೋಳಿ ತ್ಯಾಜ್ಯಗಳನ್ನು ತಂದು ರಸ್ತೆ ಬದಿ ಎಸೆಯುತ್ತಾರೆ .
ಇದು ದುರ್ನಾತ ಬೀರುತ್ತದೆ.
ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಸದಸ್ಯರು ಹೇಳಿದರು.
ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನವಿಲ್ಕದೆ ತೊಂದರೆಯಾಗುತ್ತಿದೆ.
ನಿಧನರಾದವರ ಶವಗಳ ಅಂತ್ಯ ಸಂಸ್ಕಾರಮಾಡಲು ವ್ಯವಸ್ಥೆಗಳಿಲ್ಲ.
ಶವವನ್ನು ಸುಳ್ಯದ ಕೊಡಿಯಾಲಬೈಲಿನ ಶವಾಗಾರದಲ್ಲಿ ಸುಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆದುದರಿಂದ ಕೂಡಲೇ ಸರಕಾರಿ ಜಾಗದಲ್ಲಿ ಶವಾಗಾರಕ್ಕೆ ಮತ್ತು ಘನತ್ಯಾಜ್ಯ ಘಟಕಕ್ಕೆ ಸರಕಾರ ಸ್ಥಳ ಕಾದಿರಿಸಿ,ಅದನ್ನು ಪಂಚಾಯತ್ ಗೆ ವಹಿಸಿಕೊಡಬೇಕು ಎಂದು ಹೇಳಿದರು.
ಈಗಾಗಲೇ ಜಾಲುಪಣೆ ಎಂಬಲ್ಲಿ ಸ್ಮಶಾನಕ್ಕೆ ಕಾದಿರಿಸಿದ ಸರಕಾರಿ ಸ್ಥಳವಿದ್ದು ಇದನ್ನು ಕಂದಾಯ ಇಲಾಖೆಯವರು ಅಳತೆ ಮಾಡಿ ಪಂಚಾಯತ್ ಗೆ ವಹಿಸಿಕೊಡಬೇಕು ಎಂದು ಸದಸ್ಯರು ಹೇಳಿದರು.
ಈ ಬಗ್ಗೆ ಜಿಲ್ಲಾಧಿಕಾರಿ,ಎ.ಸಿ.ಹಾಗೂ ತಹಶೀಲ್ದಾರರಿಗೆ ಮನವಿ ನೀಡಲು ನಿರ್ಧರಿಸಲಾಯಿತು
.ಮೇ 25 ರ ಒಳಗೆ ಸ್ಥಳ ಪರಿಶೀಲನೆ ಮಾಡಿ ಸ್ಥಳವನ್ನು ಪಂಚಾಯತ್ ಗೆ ವಹಿಸಿಕೊಡದಿದ್ದರೆ ಮೇ.26 ರಂದು ಗ್ರಾಮಸ್ಥರು,ಸಂಘ ಸಂಸ್ಥೆಗಳ ಮೀಟಿಂಗ್ ಕರೆದು ಮುಂದಿನ ಯೋಜನೆ ರೂಪಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಂದ್ರಾವತಿ, ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಮಾಧವ ಮುಂಡಾಜೆ, ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ, ಶ್ರೀಮತಿ ಗುಲಾಬಿ ಉಪಸ್ಥಿತರಿದ್ದರು.
ಪಿ.ಡಿ.ಒ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿ,ವಂದಿಸಿದರು.