ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ 2022 – 23 ನೇ ಸಾಲಿನ ಮದರಸಾ ಪ್ರಾರಂಭೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸುಳ್ಯ.ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ ಇದರ 2022. 23 ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವದ ಅಂಗವಾಗಿ ‘ಫತ್ ಹೇ ಮುಭಾರಕ್’ ಸಮಾರಂಭ ಇಂದು ಮೊಗರ್ಪಣೆ ಮಸೀದಿ ಆವರಣದಲ್ಲಿ ನಡೆಯಿತು.
ನೂರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸಾ ಮೊಗರ್ಪಣೆ ಇದರ ಅಧೀನದಲ್ಲಿ ನಡೆದ ಮದರಸ ಪ್ರಾರಂಭೋತ್ಸವದ ಸಭೆಯ ಅಧ್ಯಕ್ಷತೆಯನ್ನು ಎಚ್ ಐ ಜೆ ಕಮಿಟಿ ಮೊಗರ್ಪಣೆ ಇದರ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಫುಡ್ ವಹಿಸಿದ್ದರು.
ಸಭೆಯ ವೇದಿಕೆಯಲ್ಲಿ ಜಮಾತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಮದರಸ ಉಸ್ತುವಾರಿ ಸಿ ಎಂ ಉಸ್ಮಾನ್, ಮದರಸ ಸದರ್ ಮುಅಲ್ಲಿಮ್ ಮಹಮ್ಮದ್ ಸಕಾಫಿ, ಅಧ್ಯಾಪಕರುಗಳಾದ ಅಬ್ದುಲ್ ನಾಸಿರ್ ಸಕಾಫಿ, ಹಂಝ ಸಖಾಫಿ,ಯೂಸುಫ್ ಮುಸ್ಲಿಯಾರ್ , ಮೂಸಾ ಮುಸ್ಲಿಯಾರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಮಹಮ್ಮದ್ ಸಕಾಫಿ ‘ಮನುಷ್ಯ ಜೀವನದಲ್ಲಿ ಉತ್ತಮ ವಿದ್ಯಾಭ್ಯಾಸದ ಕಲಿಕೆ ಅತಿ ಅವಶ್ಯಕವಾಗಿದೆ. ಸಮಾಜದಲ್ಲಿ ಉತ್ತಮ ಮತ್ತು ಗೌರವಿತ ಬಾಳು ನಡೆಸಲು ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಬಾಲ್ಯ ಜೀವನದ ವಿದ್ಯಾಭ್ಯಾಸ ಅತಿ ಮುಖ್ಯವಾದದ್ದು. ಶಿಕ್ಷಣವಿಲ್ಲದ ಬದುಕು ಜೀವನದಲ್ಲಿ ಉತ್ತಮ ಗುರಿಯನ್ನು ನೀಡಲು ಸಾಧ್ಯವಿಲ್ಲ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳನ್ನು, ಹಾಗೂ ಕಳೆದ ಒಂದುವರೆ ತಿಂಗಳ ರಜೆಯ ಬಳಿಕ ಮದರಸಕ್ಕೆ ಬಂದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭ ಕೋರಲಾಯಿತು.
ಪ್ರಾರಂಭೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.