ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ , ತಾಲೂಕು ಭಜನಾ ಪರಿಷತ್ ,ಶ್ರೀ ಭಗವತಿ ಯುವ ಸೇವಾ ಸಂಘ ಇದರ ಆಶ್ರಯದಲ್ಲಿ
ಬೂಡು ಭಗವತಿ ದೇವಸ್ಥಾನದ ವಠಾರದಲ್ಲಿ ಪ್ರಥಮ ವರ್ಷದ ಮಕ್ಕಳ ಭಜನಾ ತರಬೇತಿ ಶಿಬಿರದ ಉದ್ಘಾಟನೆಯು ಮೆ.11 ರಂದು ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ಎ.ರಾಮಚಂದ್ರ ವಹಿಸಿದ್ದರು. ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗೇಶ್ ರವರು ದೀಪ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ಉಪಸ್ಥಿತರಿದ್ದರು.ಕು. ಬಿಂದು ಪ್ರಾರ್ಥಿಸಿದರು. ಭಜನೋತ್ಸವ ಸಮಿತಿ ಸಂಚಾಲಕಿ ಹೇಮಲತಾ ಸ್ವಾಗತಿಸಿದರು. ಭಗವತಿ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ಕುಸುಮಾಧರ ರೈ ಬೂಡು ವಂದಿಸಿದರು. ಭಜನಾ ಪರಿಷತ್ ಕೋಶಾಧಿಕಾರಿ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭಜನಾ ತರಬೇತಿ ತರಗತಿಯನ್ನು ತರಬೇತುದಾರ ಶಿವಪ್ರಸಾದ್ ಆಲೆಟ್ಟಿ ಮತ್ತು ಶ್ರೀಮತಿ ಶ್ರೀದೇವಿನಾಗರಾಜ ಭಟ್ ರವರು ನಡೆಸಿಕೊಟ್ಟರು. ಸುಮಾರು 50 ಮಕ್ಕಳು ತರಬೇತಿ ಶಿಬಿರಾರ್ಥಿಗಳಾಗಿ ಭಾಗವಹಿಸಿದರು. ಭಗವತಿ ಯುವ ಸೇವಾ ಸಂಘ ದ ಪದಾಧಿಕಾರಿಗಳು, ಸದಸ್ಯರು ಹಾಗೂ ಯೋಜನೆಯ ವಲಯ ಮೇಲ್ವಿಚಾರಕರು ಮತ್ತು ಟ್ರಸ್ಟ್ ನ ಸದಸ್ಯರು, ಕಾರ್ಯಕ್ರಮದ ಸಂಚಾಲಕರು ಸಹಕರಿಸಿದರು.