ಜೇಸಿಐ ಪಂಜ ಪಂಚಶ್ರೀ ಯ ಆಶ್ರಯದಲ್ಲಿ ಕೋವಿಡ್ ಜಾಗೃತಿ ಕಾರ್ಯಕ್ರಮ ಮೇ. ೧೦ರಂದು ಸಂಜೆ ಪಂಜ ಗ್ರಾಮ ಪಂಚಾಯಿತಿ ನಲ್ಲಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಪಂಜ ಪಂಚಶ್ರೀ ಯ ಅಧ್ಯಕ್ಷರಾದ ಶಿವಪ್ರಸಾದ್ ಹಾಲೆಮಜಲು ವಹಿಸಿದ್ದರು. ಕೋವಿಡ್ ಜಾಗೃತಿ ಸೂಚನಾ ಫಲಕವನ್ನು ಪಂಜ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷರಾದ ಶ್ರೀಮತಿ ನೇತ್ರಾವತಿ ಕಲ್ಲಾಜೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪಂಜ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಜೇಸಿಐ ಪಂಜ ಪಂಚಶ್ರೀಯ ಸ್ಥಾಪಕ ಅಧ್ಯಕ್ಷರಾದ ದೇವಿಪ್ರಸಾದ್ ಜಾಕೆ, ಪೂರ್ವಾಧ್ಯಕ್ಷರುಗಳಾದ ಸವಿತಾರ ಮುಡೂರು, ಜಯರಾಮ ಕಲ್ಲಾಜೆ, ಶಶಿಧರ ಪಳಂಗಾಯ ಜತೆ ಕಾರ್ಯದರ್ಶಿಗಳಾದ ವಾಚಣ್ಣ ಕೆರೆಮೂಲೆ, ವಿಜೇಶ್ ಹಿರಿಯಡ್ಕ ಸದಸ್ಯರುಗಳಾದ ಸುಬ್ರಹ್ಮಣ್ಯ ಕಕ್ಯಾನ,ಗಗನ್ ಕಿನ್ನಿಕುಮೇರಿ, ಪ್ರಜ್ವಲ್ ಮುಂಡೋಡಿ, ಅಣ್ಣಪ್ಪ ಬೀಡು ಉಪಸ್ಥಿತರಿದ್ದರು. ಜೇಸಿಯ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಸ್ವಾಗತಿಸಿ ಕಾರ್ಯದರ್ಶಿ ಕೌಶಿಕ್ ಕುಳ ಧನ್ಯವಾದ ಸಮರ್ಪಣೆ ಮಾಡಿದರು.