ಕಳಂಜ ಗ್ರಾ.ಪಂ ನ 2021 – 22 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ನ ಕಳಂಜ ಗ್ರಾ.ಪಂ ನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಆಶ್ರಯ ಯೋಜನೆಯಲ್ಲಿ ಕೆಲ ವರ್ಷಗಳ ಹಿಂದೆ ಮನೆ ಕೆಲಸವಾಗದೆ ಬಿಲ್ ಕೊಟ್ಟಿದ್ದಾರೆಂಬ ಆರೋಪ ಬಂದಿತ್ತು. ನಾಲ್ಗುತ್ತು ಬಳಿ ಕಿರು ಸೇತುವೆ ಅಂಚು ಅಪಾಯಕಾರಿ ಯಾಗಿರುವುದು, ಮನೆ ಕೊಡುತ್ತೇನೆ ಎಂದು ಹೇಳಿ ಮನೆ ಕೊಡದಿರುವ ಬಗ್ಗೆ ಚರ್ಚೆಗಳಾಯಿತು.
ಕಳಂಜ ಗ್ರಾ.ಪಂ ನ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ಅಧ್ಯಕ್ಷತೆ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಜಯ ಇದ್ದರು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ, ಗ್ರಾ.ಪಂ ಉಪಾಧ್ಯಕ್ಷರಾದ ಗಣೇಶ್ ರೈ ಕಳಂಜ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಕಮಲ, ಪ್ರೇಮಲತಾ ಉಪಸ್ಥಿತರಿದ್ದರು . ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿ ಉಷಾ ಪ್ರಾಸಾದ್ ರೈ, ಸಮುದಾಯ ಆರೋಗ್ಯ ಅಧಿಕಾರಿ ಶಿಲ್ಪಾ, ಪ್ರಾಥಮಿಕಾ ಆರೋಗ್ಯ ಸುರಕ್ಷಾ ಅಧಿಕಾರಿ ಕೆ ಸಿ ಬೇಬಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕ ವಿಶ್ವನಾಥ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್, ಕ್ಷಯ ರೋಗ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೊಕೇಶ್ ತಂಟೆಪ್ಪಾಡಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ರಮೇಶ್ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಪಿಡಿಒ ಶ್ರೀಧರ್ ಸ್ವಾಗತಿಸಿ, ವಂದಿಸಿದರು. ಸಹೋದ್ಯೋಗಿಗಳಾದ ತಿರುಮಲೇಶ್ವರ ಮುಂಡುಗಾರು, ಗಿರಿಧರ ಕಳಂಜ, ಪುರುಷೋತ್ತಮ ಕಲ್ಲೇರಿ, ಪುಷ್ಪವತಿ ಸಹಕರಿಸಿದರು. ಸಭೆಯಲ್ಲಿ ನರೇಗಾದಲ್ಲಿ ಸಾರ್ವಜನಿಕ ಕೆಲಸ ಪೂರೈಸಿದ ಸಂಜೀವಿನಿ ಗುಂಪಿನ ಮಹಿಳೆಯರನ್ನು ಗೌರವಿಸಲಾಯಿತು.