ಸುಳ್ಯ ನ.ಪಂ. ಕಸದ ರಾಶಿ ನೋಡಲು ಬಂದ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ; ನ.ಪಂ. ಆಡಳಿತಕ್ಕೆ ಸವಾಲು ನೀಡಿದ ಪುಷ್ಪಾ ಅಮರನಾಥ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸ್ಚಚ್ಛ ಭಾರತ್ ಅಂಬಾಸಿಡರ್ ಮೋದಿಯವರಿಗೆ ಸುಳ್ಯ ನ.ಪಂ. ಕಸದ ಫೋಟೊ ಟ್ಯಾಗ್ ಮಾಡಿ : ಕಾರ್ಯಕರ್ತರಿಗೆ ಸೂಚನೆ

“ಈ ಕಸದ ರಾಶಿಯನ್ನು ಎದುರು ಇಟ್ಟುಕೊಂಡು ಇಲ್ಲಿ ಹೇಗೆ ಇರುತ್ತಾರೆ. ವಾಸನೆ ಬರುತ್ತಿದೆ … ನೀವೆಲ್ಲ ಹೇಗೆ ಇರುತ್ತೀರಿ… ಇಲ್ಲಿಯ ಪಂಚಾಯತ್‌ನಲ್ಲಿ ಆಡಳಿತ ಇಲ್ಲವೇ?. ಇಲ್ಲಿಯ ಎಂ.ಎಲ್.ಎ ಯಾರು ಅವರು ಬರುವುದಿಲ್ಲವೇ” ಎಂದು ಸುಳ್ಯ ನಗರ ಪಂಚಾಯತ್ ಎದುರಿನ ಕಸದ ರಾಶಿಯನ್ನು ನೋಡಿದ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ರವರು.
ಇಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆಗೆ ಆಗಮಿಸಿದ ಅವರು ಸಭೆ ಮುಗಿದ ನಂತರ ಸುಳ್ಯದ ಕಾಂಗ್ರೆಸ್ ಕಾರ್ಯಕರ್ತರ ಕೇಳಿಕೆಯ ಮೇರೆಗೆ ಸುಳ್ಯ ನಗರ ಪಂಚಾಯತ್‌ಗೆ ಬಂದದರು.
ನಗರ ಪಂಚಾಯತ್ ಎದುರು ಇರುವ ಕಸವನ್ನು ನೋಡಿ ಮರುಗಿದರು. ಬಳಿಕ ನ.ಪಂ. ವಿಪಕ್ಷ ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ ಹಾಗೂ ಶರೀಫ್ ಕಂಠಿಯವರಿಂದ ಮಾಹಿತಿ ಪಡೆದರು. ಬಳಿಕ ನ.ಪಂ. ಹಿಂಬದಿಯಲ್ಲಿ ಹಾಕಲಾಗಿರುವ ಕಸದ ರಾಶಿಯನ್ನು ವೀಕ್ಷಿಸಿದರು. ಕಸದ ರಾಶಿಯನ್ನು ನೋಡಿದ ಅವರು “ಇಲ್ಲಿಯ ಎಂ.ಎಲ್.ಎ. ಯಾರು? ಇಲ್ಲಿಗೆ ಬರುತ್ತಾರ ? ಎಂದು ಕೇಳಿದಾಗ, “ಎಂ.ಲ್.ಎ. ಅಂಗಾರರು, ಈಗ ಸಚಿವರಾಗಿದ್ದಾರೆ” ಎಂದು ವೆಂಕಪ್ಪ ಗೌಡರು ಹೇಳಿದರು. “ಅವರು ಬರೋದೆ ಇಲ್ವಾ. ಅವರ ಗಮನಕ್ಕೆ ಇದು ಬಂದಿಲ್ವಾ ಎಂದು ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷರು ಕೇಳಿದಾಗ, “ಶಾಸಕರು ಬರುತ್ತಾರೆ. ಹೋಗುತ್ತಾರೆ. ಇದಕ್ಕೆ ಗಮನ ಕೊಡುವುದಿಲ್ಲ ಎಂದು ವೆಂಕಪ್ಪ ಗೌಡರು ಹೇಳಿದರು.

“ಇಲ್ಲಿಯ ಆಡಳಿತದವರು ಕಸ ಸಾಗಾಟ ಮಾಡಲು ಸಾಮರ್ಥ್ಯ ಇಲ್ಲದಿದ್ದರೆ ನಮಗೆ ಹೇಳಲಿ ನಾವು ಜನರ ಆರೋಗ್ಯದ ದೃಷ್ಠಿಯಿಂದ ಕಾಂಗ್ರೆಸ್ ಪಕ್ಷ ಕಸವನ್ನು ತೆಗೆಯುತ್ತೇವೆ. ಈ ಬಗ್ಗೆ ನಾಳೆಯೇ ಪ್ರತಿಭಟನೆ ನಡೆಸಿ ಅವರಿಗೆ ಕೇಳಬೇಕು ಎಂದು ಪುಷ್ಪಾ ಅಮರನಾಥ್ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಬಳಿಕ ನಗರ ಪಂಚಾಯತ್ ಕಚೇರಿ ಒಳಗೆ ಹೋದ ರಾಜ್ಯಾಧ್ಯಕ್ಷರು ಮುಖ್ಯಾಧಿಕಾರಿಗಳಿಲ್ಲವೆ ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ.


ಬಳಿಕ ಸಿಬ್ಬಂದಿಗಳನ್ನು ಉzಶಿಸಿ ಮಾತನಾಡಿದ ಸುತ್ತಮುತ್ತ ಕಸ ಹಾಕಿಕೊಂಡಿದ್ದೀರಲ್ವಾ. ನಿಮಗೆ ಜನರ ಆಡಳಿತದ ಬಗ್ಗೆ ಕಾಳಜಿ ಇಲ್ಲವಾ?. ಜನರಿಗೆ ನೀರು, ವಿದ್ಯುತ್ ಜತೆಗೆ ಪರಿಸರ ಸ್ವಚ್ಛತೆ ಇದು ಮುಖ್ಯ. ಆದರೆ ಇಲ್ಲಿ ಅದುವೇ ಇಲ್ಲವಲ್ಲ. ಮೋದಿಯವರ ಸ್ವಚ್ಛ ಪರಿಕಲ್ಪನೆ ಎಲ್ಲಿದೆ ಎಂದು ನಾವೆಲ್ಲ ಪ್ರಶ್ನಿಸಬೇಕು. ಅವರನ್ನೇ ಇಲ್ಲಿಗೆ ಕರೆದುಕೊಂಡು ಬಂದು ತೋರಿಸಬೇಕು. ಅವರ ಸ್ವಚ್ಛ ಭಾರತವನ್ನು ತೋರಿಸಬೇಕು. ಅವರು ಗ್ರ್ಯಾಂಡ್ ಅಂಬಾಸಿಡರಲ್ಲವೇ ಎಂದು ಹೇಳಿದ ಅವರು ಇಂದಿನಿಂದಲೇ ನಮ್ಮೆಲ್ಲ ಕಾರ್ಯಕರ್ತರು ಸುಳ್ಯ ನಗರದಲ್ಲಿ ಸ್ವಚ್ಛ ಭಾರತ ಕಲ್ಪನೆ ಬಾರೀ ಯಶಸ್ವಿಯಾಗಿದೆ ಎಂದು ಚಿತ್ರ ಸಹಿತ ಟ್ಯಾಗ್ ಮಾಡಿ ಇಲ್ಲಿಯ ಕೆಲಸ ತೊರಿಸೋಣ ಎಂದು ಹೇಳಿದರು.

ಈ ವೇಳೆ ಪಂಚಾಯತ್ ಸಿಬ್ಬಂದಿ ಸುದೇವರು ಸೊಳ್ಳೆಗಳ ಕಾಟ ವಿಪರೀತ ಇದೆ. ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದಾಗ, `’ನೋಡಿ ನೀವು ಸಿಬ್ಬಂದಿಗಳಿ ನೀವೆ ಸಮಸ್ಯೆ ಹೇಳುತ್ತಿದ್ದೀರಿ. ನಾಳೆ ನಾವು ಪ್ರೊಟೆಸ್ಟ್ ಮಾಡ್ತೇವೆ.. ನೀವು ನಮ್ಮ ಜತೆ ಇರಬೇಕು. ಇಲ್ಲಿಯ ಕಸವನ್ನು ತೆಗಿಸೋಣ” ಎಂದು ಅವರು ಹೇಳಿದರು.


ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.