Breaking News

ಕಾಂಗ್ರೆಸ್ ಮಹಿಳಾ ಸಮಾವೇಶ ಸಭೆಯಲ್ಲಿ ಸರಸ್ವತಿ ಕಾಮತ್ ಅಸಮಾಧಾನ : ಕಣ್ಣೀರು

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಾಮತ್ ರ ‘ಬಕೆಟ್’ ಪದ ಬಳಕೆಗೆ ಉಮಾಶ್ರೀ ಯವರ ‘ಹಣೆಬರಹ’ ಹೇಳಿಕೆ

 

ಸುಳ್ಯದಲ್ಲಿ ನಡೆದ ನಾ… ನಾಯಕಿ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಯವರ ಭಾಷಣದ ನಡುವೆ ಮಾಜಿ ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್ ಅಸಮಾಧನ ಹೊರ ಹಾಕಿದ ಹಾಗೂ ಉಮಾಶ್ರೀ ಮತ್ತು ಇತರ ನಾಯಕರು ಕಾಮತ್ ರನ್ನು ಸಮಾಧಾನ ಪಡಿಸಿದ ಘಟನೆ ನಡೆದಿದೆ.

 

ಯುವಜನ ಸಂಯುಕ್ತ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ ಯವರು‌ ತಮ್ಮ ಭಾಷಣದ ಮಧ್ಯೆ ಪಂಚಾಯತ್ ಸದಸ್ಯರು ಯಾರು, ಯಾವ ಯಾವ ಜವಾಬ್ದಾರಿ ನಿಮಗಿದೆ ಎಂದು ಒಬ್ಬೊಬ್ಬರನ್ನೇ ಕೇಳುತ್ತಿದ್ದಾಗ, ಹಿಂಬದಿ ಕುಳಿತಿದ್ದ ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್ ರವರು ತಮ್ಮ ಸರದಿ ಬಂದಾಗ ಎದ್ದು ನಿಂತು ” ನಾನು ಜಿ.ಪಂ. ಸದಸ್ಯೆ ಯಾಗಿದ್ದೆ. ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ. ಜಿ.ಪಂ. ಚುನಾವಣೆ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆ ನಡೆಯಿತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅವರಿಗೆ ಶಿಕ್ಷೆಯಾಗಿದೆ ಎಂದು ವಿವರ ನೀಡುತ್ತಾ ನಮಗೆ ಪಕ್ಷದಲ್ಲಿ ಯಾವುದೇ ಸ್ಥಾನ ಮಾನ ಸಿಗುವುದಿಲ್ಲ. ಆದರೆ ಬಕೆಟ್ ಹಿಡಿಯುವವರಿಗೆ ಸಿಗುತ್ತದೆ ಎಂದು ಅಸಮಾಧಾನ ಹೊರ ಹಾಕಿದರು. ಆಗ ಉಮಾಶ್ರೀ ಯವರು “ಪಕ್ಷಕ್ಕಾಗಿ ದುಡಿಯುತ್ತೇವೆ. ಕೆಲವು ಬಾರೀ ಹೀಗಾಗುತ್ತದೆ. ಅದು ಹಣೆ ಬರಹ” ಎಂದು ಹೇಳಿದರು. ಉಮಾಶ್ರೀ ಯವರು ಹಣೆ ಬರಹ ಎಂದು ಹೇಳುತ್ತಿದ್ದಂತೆ ಎದ್ದು ನಿಂತ ಕಾಮತ್ ರು ಹಣೆಬರಹ ಹೇಗಾಗುತ್ತದೆ. ವೈಯಕ್ತಿಕ ಬದುಕಲ್ಲಾದೆ ಹಣೆಬರಹ ಎಂದು ಹೇಳಬಹುದು ಇಲ್ಲಿ ಹಾಗಲ್ಲ ಎಂದು ಹೇಳಿದರು. “ಸರಸ್ವತಿ ನೋಡಮ್ಮ ಬಕೆಟ್ ಪದ ಬಳಕೆ ಮಾಡುವುದು ಸರಿಯಲ್ಲ. ತಪ್ಪಾಗುತ್ತದೆ ಎಂದು ಹೇಳಿದಾಗ, “ಇದು ನಮ್ಮ ನೋವು. ಕೆಲಸ ಮಾಡದವರಿಗೆ ಸ್ಥಾನಮಾನ ಸಿಕ್ಕಿದ್ದು ನೋಡಿದ್ದೇವೆ. ಇದನ್ನು ಹೇಳಬಾರದೆಂದರೆ ಹೇಗೆ ಎಂದು ಕುಳಿತಲ್ಲಿಂದ ಎದ್ದು ವೇದಿಕೆಯತ್ತ ಹೋಗಿ ತನ್ನ ಅಹವಾಲು ಮಂಡಿಸಿದರು. ವೇದಿಕೆಯಲ್ಲಿದ್ದ ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ, ಪಿ.ಎಸ್.ಗಂಗಾಧರ್ ಮೊದಲಾದವರು ಕಾಮತ್ ರನ್ನು ಸಮಾಧಾನಿಸಿ ಹಿಂಬದಿ ಕರೆತಂದರು. ಈ ವೇಳೆ ಕಾಮತ್ ರು ಕಣ್ಣೀರಿಟ್ಟರು. ” ಸರಸ್ವತಿ ಯವರ ನೋವು ನನಗೆ ಅರ್ಥವಾಯಿತು. ಗ್ರಾಮ ಗ್ರಾಮದಲ್ಲಿಯೂ ಈ ರೀತಿಯ ನೋವು ಮಹಿಯರಲ್ಲಿರಬಹುದು.‌ಅದನ್ನು ತಿಳಿಯೋಣ. ಧೈರ್ಯ ವಂತೆ ಈ ಹೆಣ್ಣು ಮಗಳು ನೋವು ತೋಡಿಕೊಂಡಳು. ಇನ್ನೂ ಹಲವರು ನೋವನ್ನು ಮನಸ್ಸಿನಲ್ಲೆ ಇಡುತ್ತಾರೆ. ಇವರ ಧೈರ್ಯ ವನ್ನು ಶ್ಲಾಘಿಸುತ್ತೇವೆ. ಸರಸ್ವತಿ ನಿನ್ನ ಜತೆ ನಾವಿದ್ದೇವೆ ಎಂದು ಹೇಳಿದರು.

 

ಸಭೆ ಮುಗಿದ ಬಳಿಕವೂ ಉಮಾಶ್ರೀ ಯವರು ಸರಸ್ವತಿ ಕಾಮತ್ ರ ಬಳಿ ಬಂದು ಮಾತನಾಡಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.