ನಾಲ್ಕೂರು ಗ್ರಾಮದ ಚೆಮ್ನೂರು ದಾಮೋದರ ಗೌಡರವರು ಇಂದು ಮುಂಜಾನೆ ನಿಧನರಾದರು. ಅವರಿಗೆ ೯೦ ವರ್ಷ ವಯಸ್ಸಾಗಿತ್ತು. ಪ್ರಗತಿಪರ ಕೃಷಿಕರು, ಕೊಡುಗೈ ದಾನಿ ಆಗಿದ್ದ ಇವರು ಊರಿನಲ್ಲಿ ಹಿರಿಯರಾಗಿ ಜನಾನುರಾಗಿಯಾಗಿದ್ದರು.
ಮೃತರು ಮಕ್ಕಳಾದ ಶಾಮಯ್ಯ ಗೌಡ, ಮಹಾಲಿಂಗ ಗೌಡ, ಪುತ್ರಿಯರಾದ ಶ್ರೀಮತಿ ರತ್ನ ಕಜ್ಜೋಡಿ, ಶ್ರೀಮತಿ ನಾಗಮ್ಮ ನೆಡ್ಚಿಲು ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳು, ಹಾಗೂ ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ. (ವರದಿ : ಡಿಹೆಚ್)