ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ 2021 -22 ನೇ ಸಾಲಿನ ವಾರ್ಷಿಕ ಮಹಾಸಭೆಯು ಮೇ. ೦೯ ರಂದು ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಸಭಾಂಗಣದಲ್ಲಿ ಅಧ್ಯಕ್ಷ ಆನಂದ ಗೌಡ ಪಡ್ಪು ಇವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಭೆಯಲ್ಲಿ ವಾರ್ಷಿಕ ವರದಿಯನ್ನು ಸಂಘದ ಕಾರ್ಯದರ್ಶಿ ಸತೀಶ್ ಕುಮಾರ್ ಕಿಲಂಗೋಡಿ ಸಭೆಯಲ್ಲಿ ಮಂಡಿಸಿದರು. ಸಭೆಯ ವರದಿಯ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಈ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ವಾರ್ಷಿಕ ಜಮಾ ಖರ್ಚು ಲೆಕ್ಕಪತ್ರವನ್ನು ಸಂಘದ ಕೋಶಾಧಿಕಾರಿ ಶ್ರೀಮಹಾಲಿಂಗ ಪಾಟಾಳಿ ಕುರುಂಬುಡೇಲು ಸಭೆಗ್ಲೆ ಮಂಡಿಸಿದರು. ಸಭೆಯಲ್ಲಿ ಈ ಲೆಕ್ಕಪತ್ರವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ನಂತರ ವರ್ಷದ ಕಾರ್ಯಕ್ರಮಗಳ ಅವಲೋಕನ ನಡೆಸಲಾಯಿತು. ನಂತರ ಮುಂದಿನ ವರ್ಷದ ಕಾರ್ಯಕ್ರಮವನ್ನು ಯೋಜಿಸಿ ಅನುಮೋದನೆ ನೀಡಲಾಯಿತು.
ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಆನಂದ ರೈ ಪುಡ್ಕಜೆ ಹಾಗೂ ನಿಕಟಪೂರ್ವಾಧ್ಯಕ್ಷರಾದ ಅಮೃತ ಕುಮಾರ್ ಕಿಲಂಗೋಡಿ ಉಪಾಧ್ಯಕ್ಷ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ ಜತೆ ಕಾರ್ಯದರ್ಶಿ ಶಶಿಧರ ಮಣಿಯಾಣಿ ಬೀಡು ಉಪಸ್ಥಿತರಿದ್ದರು. ನಂತರ 2022-23ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಕಾರ್ಯದರ್ಶಿಯಾಗಿ ಶ್ರೀ ಸಂಜಯ್ ನೆಟ್ಟಾರು, ಕೋಶಾಧಿಕಾರಿಯಾಗಿ ವಸಂತ ಗೌಡ ಪಡ್ಪು ಉಪಾಧ್ಯಕ್ಷರಾಗಿ ವಸಂತ ಉಲ್ಲಾಸ್ ಜತೆ ಕಾರ್ಯದರ್ಶಿಯಾಗಿ ಶ್ರೀನಿವಾಸ ಕುರುಂಬುಡೇಲು, ನಿಕಟ ಪೂರ್ವಾಧ್ಯಕ್ಷರಾಗಿ ಶ್ರೀ ಆನಂದ ಗೌಡ ಪಡ್ಪು ಇವರನ್ನು ಆಯ್ಕೆ ಮಾಡಲಾಯಿತು.
ಉಮೇಶ್ ಕಜೆ, ಚಂದ್ರಶೇಖರ ಗೌಡ ಪಿಲಿಕಜೆ ಬಸ್ತಿಗುಡ್ಡೆ, ನಾರಾಯಣ ಪಾಟಾಳಿ ಬಸ್ತಿಗುಡ್ಡೆ, ಮಹಾಲಿಂಗ ಪಾಟಾಳಿ ಕುರುಂಬುಡೇಲು, ಪದ್ಮನಾಭ ಚೂಂತಾರು, ಬಾಲಕೃಷ್ಣ ಚೀಮುಳ್ಳು ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಚುನಾವಣಾ ಅಧಿಕಾರಿಯಾಗಿ ಪೂರ್ವಾಧ್ಯಕ್ಷ ಅಮೃತ್ ಕುಮಾರ್ ಇವರು ಕಾರ್ಯನಿರ್ವಹಿಸಿದರು.
ಕಾರ್ಯದರ್ಶಿ ಸತೀಶ್ ಕುಮಾರ್ ಕಿಲಂಗೋಡಿ ಸ್ವಾಗತಿಸಿ, ಜತೆ ಕಾರ್ಯದರ್ಶಿ ಶಶಿಧರ ಮಣಿಯಾಣಿ ಬೀಡು ವಂದಿಸಿದರು. ಕೋಶಾಧಿಕಾರಿ ಮಹಾಲಿಂಗ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು.