ಸುರಿವ ಮಳೆಯ ಮಧ್ಯೆ ಭಕ್ತಾದಿಗಳಿಂದ ನಿರಂತರ ಶ್ರಮದಾನ
ಅರಂತೋಡು ಗ್ರಾಮದ ತೋಟಂಪಾಡಿ ಶ್ರೀ ಉಳ್ಳಾಕುಳು ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.13ರಿಂದ ಮೇ.15ರವರೆಗೆ ಜರುಗಲಿದ್ದು, ಭಕ್ತಾದಿಗಳಿಂದ ನಿರಂತರ ಶ್ರಮದಾನ ಕಾರ್ಯ ಜರುಗುತ್ತಿದೆ.
ಸುರಿಯ ಮಳೆಯ ಮಧ್ಯೆ ಸ್ವಯಂಸೇವಕರು ನಿರಂತರವಾಗಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ವಿವಿಧ ಬೈಲುವಾರು ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.