ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ಮೇ ೦೯ರಂದು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಯುವ ರೆಡ್ ಕ್ರಾಸ್ ಉಪ ವಿಭಾಗ ಮಂಗಳೂರು, ಇದರ ಅಧ್ಯಕ್ಷರಾದ ಮಿ. ಸಚೇತ್ ಸುವರ್ಣ ಭಾಗವಹಿಸಿ ರೆಡ್ಕ್ರಾಸ್ನ ಹುಟ್ಟು, ನಡೆದು ಬಂದ ದಾರಿ, ಅದರ ಕಾರ್ಯ ವೈಖ್ಯರಿಗಳನ್ನು ವಿವರಿಸುತ್ತಾ, ಯುದ್ಧ, ಕ್ಷಾಮ, ಅತಿವೃಷ್ಟಿಗಳ ಸಂದರ್ಭದಲ್ಲಿ ರೆಡ್ ಕ್ರಾಸ್ ಹೇಗೆ ನಿಭಾಯಿಸಬಹುದು ಎಂಬುದನ್ನು ತಿಳಿಸಿಕೊಟ್ಟರು. ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿಕೆ ನಟರಾಜನ್ ಮಾತನ್ನಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದಲ್ಲಿ ರೆಡ್ ಕ್ರಾಸ್ನ ಒಡನಾಟವನ್ನು ಮೆಲುಕು ಹಾಕಿದರು. ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇದರ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ಸ್ವಾಗತಿಸುತ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ಎನ್.ಎಮ್.ಸಿಯ ರೆಡ್ ಕ್ರಾಸ್ ಅಧಿಕಾರಿ ಡಾ. ಅನುರಾಧ ಕುರುಂಜಿ, ಶ್ರೀಮತಿ ಮಮತಾ ಪಾರೆಪ್ಪಾಡಿ, ಬೇಬಿ ವಿದ್ಯಾ, ಫಿಸಿಯೋಥೆರಾಪಿ ಕಾಲೇಜಿನ ಉಪನ್ಯಾಸಕರು, ಎನ್.ಎಮ್.ಸಿಯ ರೆಡ್ ಕ್ರಾಸ್ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು, ಪದವಿ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.
ಕು. ಸ್ಮಿತಾ ಮತ್ತು ಕು. ಶರಧಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಕು. ನೇಹ ಎಸ್. ಹಾಗೂ ಕು. ಪ್ರತೀಕ್ಷಾ ನಿರೂಪಿಸಿ ವಂದಿಸಿದರು.