Breaking News

ಸುಳ್ಯ ನ.ಪಂ. ನಲ್ಲಿ ಕಸದ ಸಮಸ್ಯೆ : ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಬ್ಲಾಕ್ ಕಾಂಗ್ರೆಸ್ ಸಾಥ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಒಳಚರಂಡಿ ಅವ್ಯವಸ್ಥೆ : ಬಾಳೆ ಗಿಡ ನೆಟ್ಟು ಪ್ರತಿಭಟನೆ

ನಗರದ ಕಸ ತೆಗೆಯಲು ಜೆಸಿಬಿ ಏರಿ ನ.ಪಂ. ಗೆ ಬಂದ ಕಾಂಗ್ರೆಸ್ಸಿಗರು : ಆಡಳಿತಕ್ಕೆ ವಾಗ್ದಾಳಿ

ಸುಳ್ಯ ನಗರದ ಕಸ ತೆರವಿಗೆ ಆಗ್ರಹಿಸಿ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ನಗರ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು. ಯೂತ್ ಕಾಂಗ್ರೆಸ್‌ಗೆ ಬ್ಲಾಕ್ ಕಾಂಗ್ರೆಸ್ ಸಾಥ್ ನೀಡಿತು. ನ.ಪಂ. ಎದುರಿನ ಆವರಣದಲ್ಲಿ ಪ್ರತಿಭಟನಾ ಸಭೆಗೂ ಮುನ್ನ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಜೆಸಿಬಿ ಏರಿ ಸುಳ್ಯ ನಗರವಾಗಿ ನ.ಪಂ. ಎದುರು ಬಂದರು. ಅಲ್ಲಿ ಸಭೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸುಳ್ಯ ನಗರ ಪಂಚಾಯತ್ ವಿಪಕ್ಷ ಸದಸ್ಯ ಎಂ.ವೆಂಕಪ್ಪ ಗೌಡರು, “ಕಳೆದ ಚುನಾವಣೆಯ ಸಂದರ್ಭ ಇಲ್ಲಿನ ಕಸದ ಸಮಸ್ಯೆಯನ್ನು ನಾವು ಜನರಿಗೆ ಹೇಳಿ ಕಾಂಗ್ರೆಸ್ ಗೆ ಮತ ನೀಡಿ ನಾವು ಕಸವನ್ನು ತೆಗೆದು ತೋರಿಸುತ್ತೇವೆ ಎಂದು ಹೇಳಿದ್ದೆವು. ಆದರೆ ಸುಳ್ಯದ ಜನರು ಬಿಜೆಪಿಗೆ ಮತ ನೀಡಿ ಅವರಿಗೆ ಅಧಿಕಾರ ಕೊಟ್ಟರು. ಆದರೆ ಬಿಜೆಪಿ ಜನರಿಗೆ ಮೋಸ ಮಾಡಿದೆ. ಜನರು ಅವರ ಮೇಲಿಟ್ಟ ವಿಶ್ವಾಸವನ್ನು ಹುಸಿ ಮಾಡಿದ್ದಾರೆ. ಇಲ್ಲಿ ಕಳೆದ ೧೫ ವರ್ಷದಿಂದ ಬಿಜೆಪಿ ಆಡಳಿತ, ಎಂ.ಎಲ್.ಎ., ಎಂ.ಪಿ., ಸರಕಾರ ಎಲ್ಲವೂ ಅವರದೇ ಆದರೂ ಇಲ್ಲಿಯ ಕಸ ತೆರವು ಮಾಡಲು ಆಗುವುದಿಲ್ಲವಾದರೆ ಆಡಳಿತದವರಿಗೆ ನಾಚಿಗೆ ಆಗಬೇಕೆಂದು ಅವರು ವಾಗ್ದಾಳಿ ಮಾಡಿದರು.


“ಅವರದೇ ಪಕ್ಷದ ಸುಪ್ರೀತ್ ಎಂಬ ಯುವಕ ಇಲ್ಲಿಯ ಸಮಸ್ಯೆಯ ಕುರಿತು ಹೇಳಿದರೆ ಅವರನ್ನು ಗ್ರೂಪ್‌ನಿಂದ ರಿಮೂವ್ ಮಾಡುತ್ತಾರೆ.ಚಿತ್ರ ನಟ ಅನಿರುದ್ಧ್ ಜಾಗೃತಿ ಮೂಡಿಸಿದ್ದಲ್ಲದೆ, ಕಸ ತೆರವಿಗೆ ವಿನಂತಿ ಮಾಡಿದರೆ ನಗರ ಪಂಚಾಯತ್ ಅಧ್ಯಕ್ಷರು ಉಡಾಫೆಯ ಮಾತನಾಡುತ್ತಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಆದರೆ ಅನಿರುದ್ಧ್ ರವರು ನ.ಪಂ. ಅಧ್ಯಕ್ಷರಿಗೆ ಸರಿಯಾಗೇ ಉತ್ತರ ನೀಡಿದ್ದಾರೆ” ಎಂದು ಹೇಳಿದರು.
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯರು ಮಾತನಾಡಿ, “ ನಗರ ಪಂಚಾಯತ್‌ನಲ್ಲಿ ನಮ್ಮ ಸದಸ್ಯರ ಸಂಖ್ಯೆ ಕಡಿಮೆ ಇರಬಹುದು. ಆದರೆ ಸುಳ್ಯದಲ್ಲಿ ನಮ್ಮ ಮತದಾರರಿದ್ದಾರೆ. ಅವರೆಲ್ಲರಿಗೂ ಇಲ್ಲಿಯ ಕಸದಿಂದ ಸಮಸ್ಯೆ ಆಗುತ್ತಿದೆ. ಸುಳ್ಯದ ಗೌರವ ಹಾಳಾಗುತ್ತಿದೆ. ಇದಕ್ಕೆಲ್ಲ ನಗರ ಪಂಚಾಯತ್ ಆಡಳಿತವೇ ಕಾರಣ. ಆದ್ದರಿಂದ ಈ ಕಸವನ್ನು ತೆಗೆಯಬೇಕೆಂದು ನಾವು ಆಡಳಿತಕ್ಕೆ ಬುದ್ದಿ ಹೇಳುತ್ತಿzವೆ ಎಂದು ಹೇಳಿದರು.
ಸುಳ್ಯದವರೇ ಮುಖ್ಯಮಂತ್ರಿಯಾಗಿದ್ದರೂ, ಕೇಂದ್ರ ಸಚಿವರಾಗಿದ್ದರೂ, ಅವರದೇ ಪಕ್ಷದ ಸಂಸದರಿದ್ದಾರೆ. ಸಚಿವರಿದ್ದಾರೆ ಆದರೂ ಸುಳ್ಯದ ಸಮಸ್ಯೆ ನಿವಾರಣೆ ಅವರಿಂದ ಸಾಧ್ಯವಾಗಿಲ್ಲ. ಸುಳ್ಯಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಿದೆಯೋ, ೧೧೦ ಕೆ.ವಿ. ವಿದ್ಯುತ್ ವ್ಯವಸ್ಥೆ ಬಂದಿದೆಯೋ ಇದೆಲ್ಲ ಸಮಸ್ಯೆ ಯಾಕೆ ಕಾಣುತ್ತಿಲ್ಲ. ಇದಕ್ಕಿಂತಲೂ ಘನಘೋರವಾದ ಅಡಿಕೆ ಹಳದಿ ರೋಗದ ಸಮಸ್ಯೆಗೆ ಬಿಜೆಪಿ ಯಾಕೆ ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂದು ಧನಂಜಯ ಅಡ್ಪಂಗಾಯರು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಮಾತನಾಡಿ, “ಇಲ್ಲಿಯ ಕಸವನ್ನು ತೆರವು ಮಾಡಲು ನಗರಾಡಳಿತಕ್ಕೆ ಇಚ್ಛಾಶಕ್ತಿ ಇಲ್ಲ. ಕಸ ತೆರವು ಸಣ್ಣ ವಿಷಯ. ಈ ಕೆಲಸವನ್ನೇ ಇವರು ಮಾಡಲು ಆಗದಿದ್ದರೆ ಇನ್ನೇನೂ ಕೆಲಸ ಮಾಡಿಯಾರೂ ಎಂದು ಅವರು ಪ್ರಶ್ನಿಸಿದರು.
“ಇಲ್ಲಿ ಕಸದ ರಾಶಿ ನೋಡಿದರೆ ಇದೊಂದು ವರ್ಲ್ಡ್ ರೆಕಾರ್ಡ್ ಆದಂತಿದೆ. ಪಂಚಾಯತ್ ಆವರಣದಲ್ಲಿ ಇಷ್ಟು ದೊಡ್ಡ ಕಸದ ರಾಶಿ ಬೇರೆಲ್ಲೂ ಇರಲಿಕ್ಕಿಲ್ಲ. ಈ ರೀತಿ ಕಸ ಇಟ್ಟುಕೊಂಡು ಆಡಳಿತ ನಡೆಸಲು ಬಿಜೆಪಿಗೆ ನಾಚಿಕೆ ಆಗಬೇಕು. ಇಲ್ಲಿಯ ಅಧ್ಯಕ್ಷರು ಕಸ ವಿಲೇವಾರಿಯ ಕುರಿತು ವಿನಂತಿ ಮಾಡಿಕೊಂಡವರಿಗೆ ಉಡಾಫೆಯ ಮಾತನಾಡುತ್ತಾರೆ. ಲಾರಿ ಕಳುಹಿಸಿ ಎಂದು ಕೇಳುತ್ತಾರೆ. ಲಾರಿ ಕಳುಹಿಸಿದರೆ ಕಸ ಎಲ್ಲಿಗೆ ಅಧ್ಯಕ್ಷರ ಮನೆಗೆ ಕೊಂಡು ಹೋಗಿ ಹಾಕೋದಾ? ಎಂದು ಜಯಪ್ರಕಾಶ್ ರೈ ಪ್ರಶ್ನಿಸಿದರು.
ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ “ಬಿಜೆಪಿ ಪಕ್ಷದ ನಗರಾಡಳಿತದ ನಿದರ್ಶನ ಸುಳ್ಯ ನ.ಪಂ. ಎದುರಿಗೆ ಇದೆ. ಇದು ಮೋದಿಯವರ ಸ್ವಚ್ಛ ಭಾರತ್ ಕಲ್ಪನೆಗೆ ಹಿಡಿದ ಕೈಗನ್ನಡಿ. ಪ್ರಧಾನಿ ಮೋದಿಯವರು ಸುಳ್ಯಕ್ಕೆ ಬಂದು ಈ ಅವ್ಯವಸ್ಥೆ ನೊಡಿದರೆ ಅವರ ಎದೆ ಹೊಡೆದು ಹೋದಿತು ಎಂದು ಹೇಳಿದ ಅವರು ನಾವೆಲ್ಲ ಕಾರ್ಯಕರ್ತರು ಇಲ್ಲಿಂದಲೇ ಇಲ್ಲಿಯ ಕಸದ ಕುರಿತು ಮೋದಿಯವರಿಗೆ ಚಿತ್ರ ಟ್ಯಾಗ್ ಮಾಡೋಣ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮರು ಮಾತನಾಡಿ, “ಇಲ್ಲಿಯ ಆಡಳಿತ ವರ್ಗ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅಧಿಕಾರಿಗಳು ಅವರಿಗೆ ಸಾಥ್ ನೀಡುತ್ತಿದ್ದರು. ಆಡಳಿತ ಅಧಿಕಾರಿಗಳಿಗೆ ಮರ್ಗಾದರ್ಶನ ನೀಡದ್ದರಿಂದ ಈ ಸ್ಥಿತಿ ಬಂದಿದೆ. ಇದನ್ನು ತೆರವು ಮಾಡುವಲ್ಲಿ ತನಕ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಅವರು ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಕಸ ತೆರವಿಗೆ ಆಗ್ರಹಿಸಿ ಮಾತನಾಡಿದರು.
ಪ್ರತಿಭಟನಾ ಭಾಷಣದ ಬಳಿಕ ಸೇರಿದ ಕಾರ್ಯಕರ್ತರೆಲ್ಲರೂ ನ.ಪಂ. ಮುಖ್ಯಾಧಿಕಾರಿಯವರನ್ನು ಹೋಗಿ ಭೇಟಿಯಾದರು. ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿಯವರು ಒಂದು ತಿಂಗಳೊಳಗೆ ಕಸವನ್ನು ತೆರವು ಮಾಡುತ್ತೇವೆ” ಎಂದು ಪ್ರತಿಭಟನಾ ಕಾರರಿಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಕೃಷ್ಣಪ್ಪ ಜಿ, ಸುಜಯ ಕೃಷ್ಣ, ಶ್ರೀಹರಿ ಕುಕ್ಕುಡೇಲು, ದಿನೇಶ್ ಸರಸ್ವತಿಮಹಲ್, ಭವಾನಿಶಂಕರ್ ಕಲ್ಮಡ್ಕ, ನಗರ ಅಧ್ಯಕ್ಷ ಶಶಿಧರ್ ಎಂ.ಜೆ., ನ.ಪಂ ಸದಸ್ಯರಾದ ಶರೀಫ್ ಕಂಠಿ, ಡೇವಿಡ್ ಧೀರಾ ಕ್ರಾಸ್ತ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕೆ.ಸಿ.ಸಿ.ವಕ್ತಾರ ಶೌವಾದ್ ಗೂನಡ್ಕ, ಪರಶುರಾಮ ಚಿಲ್ತಡ್ಕ, ಕೆ.ಎಂ. ಮುಸ್ತಫ, ಜೂಲಿಯಾ ಕ್ರಾಸ್ತ,ಶಿವಕುಮಾರ್ ಕಂದಡ್ಕ ತಾಜುದ್ದೀನ್ ಬೆಳ್ಳಾರೆ, ಮುಜೀಪ್ ಪೈಚಾರ್, ರಂಜಿರ್ ರೈ ಮೇನಾಲ, ಸಿದ್ದೀಕ್ ಕೊಕ್ಕೊ, ಪ್ರಹ್ಲಾದ್, ಸುಧೀರ್ ರೈ ಮೇನಾಲ, ಧರ್ಮಪಾಲ ಕೊಯಿಂಗಾe, ಶಾಫಿ ಕುತ್ತಮೊಟ್ಟೆ ಇದ್ದರು.
ಯೂತ್ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಸ್ವಾಗತಿಸಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್ ವಮದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.