ಸುಳ್ಯ ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ಎಕ್ಸಲೆನ್ಸ್ ಶಿ ಕ್ಯಾಂಪಸ್ ಹಾದಿಯ ಡಿಪ್ಲೋಮಾ ಕೋರ್ಸ್ ಆರಂಭಗೊಳ್ಳಲಿದೆ.
ಇದರ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು ವಿದ್ಯಾರ್ಥಿನಿಗಳಿಗೆ ಪಿಯುಸಿ ಕಲಿಕೆಯೊಂದಿಗೆ ಶರೀಹತ್ ವಿದ್ಯಾಭ್ಯಾಸಕ್ಕೆಅವಕಾಶವಿರುತ್ತದೆ.
ಈ ಸಂಸ್ಥೆಯಲ್ಲಿ ಕುರಾನ್,ತಪ್ಸಿರ್, ಹದೀಸ್, ಫಿಖ್ಹ್, ತಸಹುಫ್,ಶರೀಹತ್ ತರಗತಿ, ವಯಕ್ತಿಕ ವಿಕಸನ, ಶರೀಯ ಕಲಿಕೆಯೊಂದಿಗೆ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ಕೋಮರ್ಸ್ ಹಾಗೂ ಆರ್ಟ್ಸ್ ವಿಭಾಗದ ಶಿಕ್ಷಣ ನೀಡಲಾಗುತ್ತದೆ.
ಅನುಭವಿ ವಿದ್ವಾಂಸರು ಹಾಗೂ ಖ್ಯಾತ ಉಪನ್ಯಾಸಕರ ತಂಡ ತರಬೇತಿ ನೀಡಲಿದ್ದು ಇದರ ದಾಖಲಾತಿ ಆರಂಭಗೊಂಡಿದೆ. ಸದುಪಯೋಗಪಡೆದುಕೊಳ್ಳುವಂತೆ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.