Breaking News

ನಾಳೆಯಿಂದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ನರಸಿಂಹ ಜಯಂತಿ ಮಹೋತ್ಸವ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯಮಠದಲ್ಲಿ ಮೇ.೧೩ ರಿಂದ ಮೇ.೧೭ ರ ವರೆಗೆ ಶ್ರೀ ನರಸಿಂಹ ಜಯಂತಿ ಮಹೋತ್ಸವ ನಡೆಯಲಿದೆ.
ಮೇ.೧೩ ರ ಪ್ರಾತಃಕಾಲ ವಸಂತ ದ್ವಾದಶಿ, ಶ್ರೀ ವೇದವ್ಯಾಸ ಜಯಂತೀ ವಸಂತ ಪೂಜೆ. ಮೇ.೧೪ ರಂದು ಗಣಹೋಮ ಮತ್ತು ಶ್ರೀ ನರಸಿಂಹ ಹೋಮ ನಡೆಯಲಿದೆ. ಮೇ.೧೫ ರ ಶ್ರೀ ನರಸಿಂಹ ಜಯಂತಿ, ಪ್ರಾತಃಕಾಲ ಶ್ರೀ ನರಸಿಂಹ ದೇವರ ಮಹಾಭಿಷೇಕ, ರಾತ್ರಿ ಹೊರಾಂಗಣ ಮತ್ತು ರಾಜಬೀದಿಯಲ್ಲಿ ವಿಮಾನೋತ್ಸವ, ವಸಂತಪೂಜೆ, ಡೋಲೋತ್ಸವ ನಡೆಯಲಿದೆ. ಮೇ.೧೬ ರ ಪೂರ್ವಾಹ್ನ ವ್ಯಾಸ ಪೂರ್ಣಿಮಾ, ವ್ಯಾಸ ಪೂಜೆ, ಮಹಾರಥೋತ್ಸವ, ವಸಂತ ಪೂಜೆ, ರಾತ್ರಿ ಡೋಲೋತ್ಸವ ನಡೆಯಲಿದೆ. ಮೇ ೧೭ ರಂದು ಕುಮಾರಧಾರೆಯಲ್ಲಿ ಅವಭೃತೋತ್ಸವ ವಸಂತಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ/ ಉಪನ್ಯಾಸ/ ಅಶೀರ್ವಚನ : ಮೇ.೧೩ ರ ಸಾಯಂಕಾಲ ೫ ರಿಂದ ಭಜನಾಮೃತ – ಯೋಗೀಶ್ ಕಿಣಿ ಮತ್ತು ಬಳಗ, ಕಾರ್ಕಳ ಇವರಿಂದ ನಡೆಯಲಿದೆ . ಮೇ.೧೪ ರ ಸಂಜೆ ೫ ಕ್ಕೆ ಅಂಕುಶ್ ಎನ್. ನಾಯಕ್ ರಿಂದ ಸಿತಾರ್ ವಾದನ ನಡೆಯಲಿದೆ. ಸಂಜೆ ೫.೪೫ ಕ್ಕೆ ಪಂಡಿತ್ ಜಯತೀರ್ಥ ಮೇವುಂಡಿ ಅವರ ಹಿಂದೂಸ್ಥಾನಿ ಗಾಯನ ದಾಸವಾಣಿ ನಡೆಯಲಿದೆ. ಮೇ.
೧೫ರ ಬೆಳಿಗ್ಗೆ ೯.೩೦ರಿಂದ ಯಜ್ಞೇಶ ಆಚಾರ್ಯ ಅವರಿಂದ ಭಕ್ತಿ ಸಂಗೀತ – ನಡೆಯಲಿದೆ. ಬಳಿಕ ಬೆ.೧೧ರಿಂದ ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಂದ ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ರಿಂದ ಆಶೀರ್ವಚನ ನಡೆಯಲಿದೆ. ಶ್ರೀ ಪೂರ್ಣಪ್ರಜ್ಞ ವಿದ್ಯಾ ಪೀಠ ಬೆಂಗಳೂರು ಇದರ ವಿದ್ವಾನ್ ಗುರು ಪವನ್ ಆಚಾರ್ಯ ಉಪನ್ಯಾಸ ನಡೆಯಲಿದೆ.
ಸಂಜೆ ೪.೦೦ ಗಂಟೆಯಿಂದ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಅವರ ಶಿಷ್ಯ ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಹಾಗೂ ದೇವರ ನಾಮಗಳ ಗಾಯನ ನಡೆಯಲಿದೆ.
ಮೇ.೧೬ ಸಂಜೆ ಗಂಟೆ ೪.೦೦ರಿಂದ ವಿದ್ವಾನ್ ಸಂದೀಪ್ ನಾರಾಯಣ ಚೆನ್ನೈ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಗಾಯನ ನಡೆಯಲಿದೆ. ಮೇ.೧೭ ಸಾಯಂಕಾಲ ೬.೦೦ ಗಂಟೆಯಿಂದ ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ -ಬಪ್ಪನಾಡು, ಮುಲ್ಕಿ ಇದರಿಂದ ಯಕ್ಷ ಗಾನ ಬಯಲಾಟ ತ್ರಿಜನ್ಮ ಮೋಕ್ಷ ನಡೆಯಲಿದೆ.
ಶ್ರೀ ಮಠದಲ್ಲಿ ವರ್ಷಂಪ್ರತಿ ನಡೆಸುವ, ಶ್ರೀನರಸಿಂಹ ಜಯಂತೀ ಮಹೋತ್ಸವವು ಶ್ರೀ ದೇವರ ಸನ್ನಿದಿ ಯಲ್ಲಿ ಮಾಮೂಲಿಯಂತೆ ಜರಗಲಿದ್ದು ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯ ಕ್ರಮ ನಡೆಯಲಿದ್ದು ಹೆಚ್ಚಿನ ಭಕ್ತರು ಆಗಮಿಸಬೇಕಾಗಿ ಮಠದ ಆಡಳಿತ ಮಂಡಳಿ ವಿನಂತಿಸಿದೆ.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.