ಸೇವಾಜೆ ಮಡಪ್ಪಾಡಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸೇವಾಜೆ ಎಂಬಲ್ಲಿ ಮೋರಿ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 10 ಮೀ.ನಷ್ಟು ಬದಲಿ ರಸ್ತೆ ನಿರ್ಮಿಸಲಾಗಿದೆ. ಆದರೆ ಈಗ ಸುರಿಯುತ್ತಿರುವ ಮಳೆಯಿಂದ ಅದು ಕೆಸರುಮಯವಾಗಿದ್ದು, ಇಂದು ಮಡಪ್ಪಾಡಿ ಗೆ ತೆರಳುತ್ತಿದ್ದ ಪುನರ್ವಸತಿ ಕಾರ್ಯಕರ್ತ ಪುಟ್ಟಣ್ಣರವರು ತಮ್ಮ ವಾಹನವನ್ನು ಚಲಾಯಿಸಲು ಹರಸಾಹಸ ಪಡುವಂತಾಯಿತು. ಇಲ್ಲಿ ಕೆಲ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದ ಘಟನೆಗಳು ನಡೆದಿವೆ. ಈ ಬಗ್ಗೆ ಸಂಬಂಧಪಟ್ಟ ವರು ತಾತ್ಕಾಲಿಕ ದುರಸ್ಥಿಯನ್ನಾದರೂ ಮಾಡಿದರೆ ಒಳ್ಳೆಯದು ಎಂಬ ಮನವಿ ಫಲಾನುಭವಿಗಳದ್ದಾಗಿದೆ.