ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೋಲ್ಚಾರು ಅಪ್ಪಕುಂಞಿ ಯವರು ನಾರ್ಕೊಡಿನಲ್ಲಿ ಪುಟ್ಟ ಅಂಗಡಿಯಲ್ಲಿ ಸ್ವಾಭಿಮಾನದ ವೃತ್ತಿ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಮಧುಮೇಹ ಕಾಯಿಲೆಯಿಂದ ಬಳಲಿ, ಕಾಲಿನ ಶಸ್ತ್ರ ಚಿಕಿತ್ಸೆಯಾಗಿ ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಇವರು ಲಕ್ಷಾಂತರ ರೂ.ಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಈಗಾಗಲೇ ವ್ಯಯಿಸಿದ್ದಾರೆ. ಈಗ ಕಿವಿಗೆ ಸಂಬಂಧಿಸಿದ malignant external otitis ಎಂಬ ಕಾಯಿಲೆಗೆ ಒಳಗಾಗಿ ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು ಜತೆಗೆ ಕಿಡ್ನಿ ಸಮಸ್ಯೆಯೂ ಸೇರಿಕೊಂಡಿದೆ. ವೈದ್ಯರು ಶಸ್ತ್ರ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದು ಕಿಡ್ನಿ ಸಮಸ್ಯೆ ಇರುವುದರಿಂದ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿಲ್ಲ. ಆರು ವಾರ ನಿರಂತರ ದುಬಾರಿ ಬೆಲೆಯ ಇಂಜೆಕ್ಷನ್ ನನ್ನು ದೀರ್ಘ ಸಮಯದವರೆಗೆ ನೀಡಲು ಸೂಚಿಸಿದ್ದಾರೆ. ಆಯುಷ್ಮಾನ್ ಯೋಜನೆಯೂ ಈ ರೋಗದ ಚಿಕಿತ್ಸೆಗೆ ಅನ್ವಯ ಆಗದಿರುವುದರಿಂದ ಚಿಕಿತ್ಸೆಯ ವೆಚ್ಚ ಭರಿಸಲು ಬಡ ಕುಟುಂಬ ಸಂಕಷ್ಟವನ್ನು ಎದುರಿಸುತ್ತಿರುವುದರಿಂದ ಚಿಕಿತ್ಸೆಯ ನೆರವಿಗೆ ದಾನಿಗಳ ಸಹಕಾರ ಯಾಚಿಸಿದ್ದಾರೆ.ಮುಂದಿನ ಚಿಕಿತ್ಸೆಯ ವೆಚ್ಚ ಅಂದಾಜು 2.5 ಲಕ್ಷ ದಷ್ಟು ಬೇಕಾಗಬಹುದು. ಬಡ ಕುಟುಂಬ ಈಗಾಗಲೇ ಲಕ್ಷಾಂತರ ರೂ ವೆಚ್ಚವನ್ನು ಚಿಕಿತ್ಸೆ ಗಾಗಿ ವ್ಯಯಿಸಿದ್ದು ಅಸಹಾಯಕ ಪರಿಸ್ಥಿತಿಯಿಂದ ಬಳಲುತ್ತಿದ್ದಾರೆ. ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿರುವ ಕುಟುಂಬಕ್ಕೆ ಬೇರೆ ಯಾವುದೇ ಆದಾಯ ಮೂಲವಿಲ್ಲ. ಮುಂದಿನ ಚಿಕಿತ್ಸೆಗೆ ಬಡ ಕುಟುಂಬ ಸಹೃದಯಿ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ.. ನೆರವು ನೀಡಬಯಸುವ ದಾನಿಗಳು ಅಪ್ಪಕುಂಞಿ ಅವರ ಪತ್ನಿ ಶಂಕರಿ ಅವರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ( AC NO: 520101012982500 ifsc code: UBIN0901172) ಸುಳ್ಯ ಶಾಖೆಗೆ ಜಮೆ ಮಾಡಿ ಸಹಕರಿಸುವಂತೆ ಮನವಿ.