ವೈರಲ್ ಪ್ರತಿಭೆಗಳಿಗೆ ಆಯುಷ್ಯ ಕಡಿಮೆ, ಗುರಿ ತಲುಪುವ ಮೊದಲೇ ನೀಡುವ ಪ್ರಶಸ್ತಿಗಳು ಪ್ರತಿಭೆಯೊಂದರ ಪ್ರಗತಿಗೆ ಮಾರಕ’ ಎಂದು ಯುವ ಸಾಹಿತಿ ಮತ್ತು ಸಮಾಜ ಸೇವಕ ಉದಯಭಾಸ್ಕರ್ ಸುಳ್ಯ ಅಭಿಪ್ರಾಯಪಟ್ಟರು.
ಮೇ.8 ರಂದು ಅವರು ಸುಳ್ಯದ ಪದ್ಮಾವತಿ ಸಭಾಭವನದಲ್ಲಿ ನಡೆದ ಸಾಹಿತ್ಯ ಸಂಗೀತ ಕಲಾಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ತಳ ಮಟ್ಟದಿಂದಲೇ ಸಂಗೀತವನ್ನು ಶ್ರದ್ಧೆಯಿಂದ ಕಲಿತು ವಿದ್ವತ್ತನ್ನು ಪಡೆಯುವ ದಾಹ ಹೊಂದಿರುವ ಮಕ್ಕಳು ಈ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ವೆಂಕಟೇಶ ಶಾಸ್ತ್ರೀಯವರು ದೀಪ ಬೆಳಗಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಾಹಿತ್ಯ ಸಂಗೀತ ಕಲಾಕೇಂದ್ರದ ನಿರ್ದೇಶಕಿ ಆರತಿ ಪುರುಷೋತ್ತಮ, ಉಪನ್ಯಾಸಕಿ ಡಾ.ಅನುರಾಧಾ ಕುರುಂಜಿ, ಗಾಯಕ ಕೈಲಾಸ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಬಾಸುಮ ಕೊಡಗು ಕಾರ್ಯಕ್ರಮ ನಿರೂಪಿಸಿದರು. ಕೈಲಾಶ್ ಶೆಣೈ ವಂದಿಸಿದರು.